ಪ್ರಾಚೀನ ಜ್ಞಾನ ಪರಂಪರೆಯನ್ನು ಒಡಲೊಳಗೆ ಇಟ್ಟುಕೊಂಡಿರುವ ಹಸ್ತಪ್ರತಿಗಳು ಇತಿಹಾಸ ಅಧ್ಯಯನ ಹಾಗೂ ಸಂಶೋಧನೆಗೆ ಪೂರಕ. ಗದುಗಿನ ಜಗದ್ಗುರು ಶ್ರೀ ತೋಂಟದಾರ್ಯ ಪದವಿ ಕಾಲೇಜಿನ ಸಹಯೋಗದಲ್ಲಿ 2016 ರ ಅ. 7 ಹಾಗೂ 8 ರಂದು ಆಯೋಜಿಸಿದ್ದ ’ಅಖಿಲ ಕರ್ನಾಟಕ ಹದಿಮೂರನೇ ಹಸ್ತಪ್ರತಿಗಳ ಸಮ್ಮೇಳನದಲ್ಲಿ ಮಂಡಿತವಾದ ಸಂಪ್ರಬಂಧಗಳ ಸಂಪುಟವೇ ’ಹಸ್ತಪ್ರತಿಗಳ ವ್ಯಾಸಂಗ-17'.
ಡಾ. ಎಂ.ಎಸ್.ಸುಂಕಾಪುರ ಸಾಹಿತ್ಯದ ಅವಲೋಕನವು 6 ಸಂಪ್ರಬಂಧಗಳಲ್ಲಿದೆ. ಗದಗ ಜಿಲ್ಲೆಯ ಹಸ್ತಪ್ರತಿಗಳ ಸಮೀಕ್ಷೆ ಕುರಿತು ಮೂರು ಸಂಪ್ರಬಂಧಗಳಿವೆ. ಜೊತೆಗೆ, ಆಯ್ದ ಪ್ರಾಚೀನ ಕಾವ್ಯಗಳ ಪರಿಷ್ಕರಣೆಯ ಪರಂಪರೆ ಹಾಗೂ ಅವುಗಳಲ್ಲಿಯ ಸಾಮ್ಯತೆ-ಭಿನ್ನತೆಯ ಚರ್ಚೆ, ಕೊನೆಗೆ, ಸಮ್ಮೇಳನಾಧ್ಯಕ್ಷರ ಸಾಹಿತ್ಯದ ಸಾಧನೆ ವಿಶ್ಲೇಷಣೆ ಈ ಕೃತಿಯು ಒಳಗೊಂಡಿದೆ.
©2024 Book Brahma Private Limited.