ಸಾಹಿತಿ-ಸಂಶೋಧಕ ಪ್ರೊ. ಎಫ್.ಟಿ.ಹಳ್ಳಿಕೇರಿ ಅವರ ಕೃತಿ-ಕಂಠ ಪತ್ರ-4. ಲೇಖಕರು ಹೇಳುವ ಹಾಗೆ ‘ಇಲ್ಲಿಯ ಸಂಪ್ರಬಂಧಗಳನ್ನು ಎರಡು ವಿಭಾಗಗಳಲ್ಲಿ ವಿಂಗಡಿಸಿದೆ. ಹಸ್ತಪ್ರತಿ ಶಾಸ್ತ್ರಕ್ಕೆ ಸಂಬಂಧಿಸಿದ 9 ಸಂಪ್ರಬಂಧಗಳಿವೆ. ಕವಿ-ಲಿಪಿಕಾರ ಹಾಗೂ ಪ್ರತಿಕಾರ. ಈ ಮೂವರು ಹಸ್ತಪ್ರತಿಗಳ ರಚನೆ ಮತ್ತು ಪರಿಚಲನೆಯಲ್ಲಿ ವಹಿಸಿದ ಪಾತ್ರ, ಲಿಪಿಕಾರರ ಚರಿತ್ರೆ, ಚಾರಿತ್ಯ್ರ, ಹಸ್ತಪ್ರತಿಗಳ ಕುರಿತು ಜನರಿಗಿದ್ದ ನಂಬಿಕೆಗಳು, ಹಸ್ತಪ್ರತಿ ಸಂರಕ್ಷಣೆಯಲ್ಲಿ ಮಠಮಾನ್ಯಗಳು ಮಾಡಿದ ಕೆಲಸದ ಬಗೆಗಿನ ವಿವೇಚನೆ , ಕನ್ನಡ ಹಸ್ತಪ್ರತಿಶಾಸ್ತ್ರ, ಐದು ಕಲ್ಲಚ್ಚಿನ ಪುಸ್ತಕಗಳ ಅವಲೋಕನ, ನಾಲ್ವಡಿ ಕೃಷ್ಣರಾಜ ಒಡೆಯರ ಅವರ ಕಾಲದ ಹಸ್ತಪ್ರತಿಗಳು, ಮಹಾರಾಷ್ಟ್ರದಲ್ಲಿ ಕನ್ನಡ ಹಸ್ತಪ್ರತಿಗಳು, ತಗರ ಪವಾಡ: ಮತ್ತೆ ಎರಡು ಹಸ್ತಪ್ರತಿಗಳ ಶೋಧ ಹೀಗೆ ಹಸ್ತಪ್ರತಿಶಾಸ್ತ್ರದ ವಿವಿಧ ಆಯಾಮಗಳ ಅಧ್ಯಯನವನ್ನು ಒಳಗೊಂಡಿವೆ.
ಎರಡನೇ ಭಾಗದಲ್ಲಿ, 11 ಸಂಪ್ರಬಂಧಗಳು ಗ್ರಂಥಸಂಪಾದನಾ ಶಾಸ್ತ್ರಕ್ಕೆ ಸಂಬಂಧಿಸಿವೆ. ಕನ್ನಡ ಗ್ರಂಥ ಸಂಪಾದನೆ: ಹೊಸ ಸಾಧ್ಯತೆಗಳು, ಉದಯಾದಿತ್ಯಾಲಂಕಾರ: ಪರಿಷ್ಕರಣೆ ಮತ್ತು ಅಧ್ಯಯನ, ಹರಿಹರನ ರಗಳೆಗಳು: ಪರಿಷ್ಕರಣೆಗಳ ಪರಿಶೀಲನೆ, ಪ್ರಾಚೀನ ಕನ್ನಡ ಪಠ್ಯಗಳ ಸಂಶೋಧನೆ: ಕ್ರೈಸ್ತ ಮಿಶನರಿಗಳ ಕೊಡುಗೆ, ಎರ್ತೂರು ಶಾಂತಿರಾಜ ಶಾಸ್ತ್ರೀ ಅವರ ಗ್ರಂಥ ಸಂಪಾದನೆ ಹೀಗೆ ಒಟ್ಟು 20 ಸಂಪ್ರಬಂಧಗಳು ಹಸ್ತಪ್ರತಿ ಗ್ರಂಥಸಂಪಾದನಾಶಾಸ್ತ್ರಗಳ ಅಧ್ಯಯನದ ಫಲಗಳಾಗಿವೆ’ ಎಂದು ಕೃತಿಯ ಒಟ್ಟು ಸ್ವರೂಪವನ್ನು ತೋರಿದ್ದಾರೆ.
©2024 Book Brahma Private Limited.