ಲೇಖಕ ಕೇಶವ ಶರ್ಮ ಕೆ. ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಡ್ಯನಡ್ಕದ ಹತ್ತಿರವಿರುವ ಕೋಡಂದೂರಿನವರು. ತಂದೆ ದಿವಂಗತ ಕೆ.ಕೆ. ನರಸಿಂಹಭಟ್ಟ, ತಾಯಿ ಕೆ.ಎನ್.ಸೀತಾ. ಲೇಖಕಿ ಸಬಿತಾ ಬನ್ನಾಡಿ ಕೇಶವ ಶರ್ಮ ಅವರ ಬಾಳ ಸಂಗಾತಿ. ಯಕ್ಷಗಾನದತ್ತ ಒಲವಿದ್ದ ಕೇಶವ ಶರ್ಮ ಅವರು ಹವ್ಯಾಸಿ ಯಕ್ಷಗಾನದ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದಾರೆ. ಸದ್ಯ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಸಿಂಗನ ಮನೆ ಗ್ರಾಮ ಶಾಂತಿನಗರದಲ್ಲಿ ನೆಲೆಸಿದ್ದಾರೆ. ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಕೇಶವ ಶರ್ಮ ಅವರು ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಹೆಣ್ಣಿನ ಪರಿಕಲ್ಪನೆ ವಿಷಯದಡಿ ಪಿಎಚ್.ಡಿ ಪದವಿಗಳಿಸಿದ್ದಾರೆ.
ಮಾರ್ಕ್ಸ್‌ವಾದಿ ವಿಮರ್ಶೆ ಸ್ತ್ರೀವಾದಿ ಚಿಂತನೆಗಳು,ಕಾದಂಬರಿಗಳ ಸಮಾಜಶಾಸ್ತ್ರದ ಕುರಿತಾಗಿ ಬಹುಮುಖಿ ರಚನಾವಾದ ಮತ್ತು ನಿರಚನದ ಕುರಿತಾಗಿ ರಚನೆ - ನಿರಚನೆ ವಸಾಹತುಶಾಹಿ ಅನುಭವದ ಕುರಿತಾಗಿ ಪಡು - ಮೂಡು ನೀಲನಕ್ಷೆ. ಕ್ರಿಯೆ - ಪ್ರತಿಕ್ರಿಯೆ ಶಬರೇಖೆ ನಿಶಿತನ ಕೆಂಪು ಡೈರಿ (ಕಾದಂಬರಿ) (ಖಿನ್ನನೊಬ್ಬನ ದಿನಚರಿ) ಚಾರು ಚರಿತ (ಕಾದಂಬರಿ) ಸ್ತ್ರೀವಾದಿ ಪರಿಕಲ್ಪನೆಗಳು ತತ್ವಜ್ಞಾನದ ಪರಿಕಲ್ಪನೆಗಳು ವಸಹಾತುಶಾಹಿ ಪರಿಕಲ್ಪನೆಗಳು ಸಾಂಸ್ಕೃತಿಕ ಪರಿಕಲ್ಪನೆಗಳು ವಿಮರ್ಶೆಯ ಪರಿಕಲ್ಪನೆಗಳು ಮಾರ್ಕ್ಸವಾದಿ ಪರಿಕಲ್ಪನೆಗಳು ಮಾರ್ಕ್ಸವಾದ ಮತ್ತು ಅನ್ಯವಾದಗಳು ಪ್ರಾತಿನಿಧಿಕತೆ ಮತ್ತು ಸ್ವಯಂಬಲ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.