ಸೂರ್ಯನ ನೆರಳು

Author : ಸಹನಾ ಹೆಗಡೆ

Pages 340

₹ 300.00




Year of Publication: 2017
Published by: ಅಭಿನವ ಪ್ರಕಾಶನ
Address: 17/18-3, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40
Phone: 9448804905, 080-23505825

Synopsys

ಪೋಲೆಂಡ್‌ ಪತ್ರಕರ್ತ ರೈಷಾರ್ಡ್ ಕಪ್ಪುಶಿನ್‌ ಸ್ಕಿ ರಚಿಸಿದ ’ಶಾಡೋ ಆಫ್ ದ ಸನ್’  ಕೃತಿಯನ್ನು ಕನ್ನಡಕ್ಕೆ ತಂದವರು ಲೇಖಕಿ ಸಹನಾ ಹೆಗಡೆ.  

ಈ ಕೃತಿಯ ಪ್ರಾರಂಭದಲ್ಲಿ ಆಫ್ರಿಕಾದಲ್ಲಿ ಅವನು ಕೈಗೊಂಡ ಸಾಹಸಗಳ ಚಿತ್ರವಿದೆ. 1962 ರಲ್ಲಿ ದರ್-ಎಸ್-ಸಲಾಂಗೆ ಹೋದಾಗ ಅವನ ಕಿವಿಗೆ ಸದ್ಯದಲ್ಲೇ ಉಗಾಂಡ ಸ್ವತಂತ್ರವಾಗಲಿರುವ ಸುದ್ದಿ ಕೇಳಿಸುತ್ತದೆ. ಅವನು ಮತ್ತು ಅವನ ಸ್ನೇಹಿತ ಲಿಯೋ ಕೂಡಲೇ ವನ್ಯಜೀವನದಿಂದ ತುಂಬಿ ತುಳುಕುತ್ತಿರುವ ಸೆರೆಂಗೆಟಿಯ ಮೂಲಕ ಕಂಪಾಲಾಕ್ಕೆ ಹೊರಡುತ್ತಾರೆ. ಸೆರೆಂಗೆಟಿಯಲ್ಲಿ "ಎಲ್ಲವೂ ಅಸಂಭವನೀಯವೆನ್ನುವಂತೆ, ನಂಬಲು ಸಾಧ್ಯವೆನ್ನುವಂತೆ ಗೋಚರಿಸುತ್ತದೆ. ಇಂತದ್ದೇ ಪ್ರಪಂಚದ ಹುಟ್ಟನ್ನು ಕಣ್ಣಾರೆ ನೋಡುತ್ತಿರುವೆವೇನೋ ಎಂಬಂತೆ ಭೂಮಿ, ಆಕಾಶ, ನೀರು, ಸಸ್ಯ ಹಾಗೂ ಪ್ರಾಣಿಸಂಕುಲಗಳೆಲ್ಲ ಇದ್ದು ಆಡಮ್ ಮತ್ತು ಈವ್‍ರ ಜನ್ಮವಿನ್ನೂ ಆಗಿರದಿದ್ದ ಕ್ಷಣಗಳಿಗೆ ಸಾಕ್ಷಿಯಾದೆವೇನೋ ಎನ್ನುವ ಭಾವನೆ ತುಂಬಿಕೊಳ್ಳುತ್ತದೆ.

20 ನೇ ಶತಮಾನದವರೆಗೂ ಆಫ್ರಿಕಾ, ಮನುಷ್ಯನ ಕುತೂಹಲದ ಕೇಂದ್ರ ಬಿಂದುವಾಗಿತ್ತು. ಅಲ್ಲಿಗೆ ತಲುಪುವುದು ಎಂದರೆ ಬೇರೆ ಗ್ರಹಕ್ಕೆ ಹೋದಂತೆಯೇ ಎಂಬ ಮಾತುಗಳಿದ್ದವು. ಸಮೃದ್ಧ ನೈಸರ್ಗಿಕ ಸಂಪನ್ಮೂಲದ ಕಾರಣಕ್ಕಾಗಿ ಲಾಭಕೋರ ಮನಸ್ಸುಗಳು ಆಫ್ರಿಕಾ ಖಂಡದ ಮೇಲೆ ಒಂದು ಕಣ್ಣು ಇರಿಸಿದ್ದವು. ಅದು ಐರೋಪ್ಯ ದೇಶಗಳ ವಸಾಹತು ನೆಲೆಯಾಗಲು ಕೂಡ  ಇಂಥದ್ದೇ ವ್ಯಾಪಾರಿ ರಾಜಕಾರಣ ಕಾರಣವಾಗಿತ್ತು.  ಈ ಕೃತಿ ವಸಾಹತು ಸಂಕೋಲೆಯಿಂದ ಬಿಡಿಸಿಕೊಳ್ಳುತ್ತಿರುವ ಆಫ್ರಿಕಾದ ಕಷ್ಟಗಳು, ಅಲ್ಲಿನ ಸ್ಥಿತಿಗತಿ,  ಭೌಗೋಳಿಕ ಲಕ್ಷಣದ ಜೊತೆಗೆ ರಾಜಕೀಯ ಸ್ಥಿತ್ಯಂತರವನ್ನು ಚರ್ಚಿಸುತ್ತದೆ. ಆಫ್ರಿಕಾ ಖಂಡವನ್ನು ಕಗ್ಗತ್ತಲ ಖಂಡ ಎಂದು ಕರೆದುದರ ಹಿನ್ನೆಲೆಯನ್ನೂ ಸಹ ಚರ್ಚಿಸುತ್ತದೆ.  

About the Author

ಸಹನಾ ಹೆಗಡೆ

ಸಹನಾ ಹೆಗಡೆ- ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರದ ಬಳಿಯ ಕಿಲಾರದವರು. 1967ರಲ್ಲಿ ಜನಿಸಿದ ಇವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ತಮ್ಮ ಹಳ್ಳಿಯಲ್ಲಿಯೇ ಮುಗಿಸಿ, ಎಮ್.ಜಿ.ಸಿ ಕಾಲೇಜ್ ಸಿದ್ಧಾಪುರದಿಂದ ಬಿ.ಎ.ಹಾಗೂ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ದೂರಶಿಕ್ಷಣದ ಮೂಲಕ ಕೌನ್ಸೆಲಿಂಗ್ ಮತ್ತು ಸೈಕೋಥೆರಪಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರ ಕೆಲವು ಲೇಖನಗಳು, ಕವನಗಳು, ಅನುವಾದಿತ ಕಥೆಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.  ...

READ MORE

Related Books