ಹೊಸಗನ್ನಡ ಕಾವ್ಯ: ನಾಲ್ಕು ಶಿಖರಗಳು

Author : ಕಾ.ವೆಂ. ಶ್ರೀನಿವಾಸಮೂರ್ತಿ

Pages 157

₹ 120.00




Year of Publication: 2019
Published by: ಸಪ್ನ ಬುಕ್ಸ್‌
Address: 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು
Phone: 08040114455

Synopsys

’ಹೊಸಗನ್ನಡ ಕಾವ್ಯ: ನಾಲ್ಕು ಶಿಖರಗಳು’ ಕೃತಿಯು ಬೇಂದ್ರೆ, ಕುವೆಂಪು, ಗೋಪಾಲಕೃಷ್ಣ ಅಡಿಗ ಹಾಗೂ ದಲಿತ ಕವಿ ಸಿದ್ಧಲಿಂಗಯ್ಯ ಅವರ ಕಾವ್ಯದ ಕುರಿತ ಬರಹ ಕೃತಿಯಲ್ಲಿದೆ. ಕೃತಿಯ ಬಗ್ಗೆ ಲೇಖಕರು, ’ಕಳೆದ ನೂರು ವರ್ಷಗಳ ಹೊಸಗನ್ನಡ ಕಾವ್ಯವು ವೈವಿಧ್ಯಮಯವಾಗಿದ್ದು,  ಈ ವೈವಿಧ್ಯತೆಗೆ ಕಾರಣ, ವಿಭಿನ್ನ ಕಾಲಘಟ್ಟಗಳ ಹಿನ್ನೆಲೆಯಲ್ಲಿ ಮೂಡಿದ ವಿವಿಧ ಸಾಹಿತ್ಯ ಪಂಥಗಳಾಗಿವೆ. ಇಲ್ಲಿ ಸಾವಿರಾರು ಕವಿಗಳು ಮೂಡಿದ್ದಾರೆ. ಅವರಲ್ಲಿ ಹತ್ತಾರು ಶಿಖರಗಳನ್ನು ಗುರುತಿಸಬಹುದಾಗಿದೆ. ಆದರೆ, ಅವರಲ್ಲಿ ಮಾರ್ಗ ನಿರ್ಮಾಪಕರೆನ್ನಿಸಿಕೊಂಡ ನಾಲ್ವರು ಕವಿಗಳನ್ನು ಸಹ ಗುರುತಿಸಬಹುದು.  ನವೋದಯ ಮಾರ್ಗವನ್ನು ಶ್ರೀಮಂತವಾಗಿ ತೆರೆದ ದ.ರಾ. ಬೇಂದ್ರೆ, ಕುವೆಂಪು ಒಂದೆಡೆಗಿದ್ದಾರೆ. ನವ್ಯ ಮಾರ್ಗವನ್ನು ಶ್ರೀಮಂತವಾಗಿ ತೆರೆದ ಎಂ. ಗೋಪಾಲಕೃಷ್ಣ ಅಡಿಗರು ಇದ್ದಾರೆ. ಅಂತೆಯೇ, ದಲಿತ ಚಳವಳಿ, ಮಾರ್ಕ್ಸ್‌‌ವಾದಿ ಸಿದ್ಧಾಂತ, ಬಿ.ಆರ್‌. ಅಂಬೇಡ್ಕರ್‌ ಸಿದ್ಧಾಂತಗಳ ಹಿನ್ನಲೆಯಲ್ಲಿ ದಲಿತ ಕಾವ್ಯ ಮಾರ್ಗವನ್ನು ತೆರೆದ ಸಿದ್ಧಲಿಂಗಯ್ಯ ಇದ್ದಾರೆ. ಹಾಗಾಗಿ ಈ ನಾಲ್ವರು ಇಲ್ಲಿ ಹೊಸಗನ್ನಡ ಕಾವ್ಯದ ನಾಲ್ಕು ಪ್ರಮುಖ ಶಿಖರಗಳಾಗಿ ನನಗೆ ಕಂಡಿದ್ದಾರೆ. ಅದರ ನಿರ್ವಚನದ ನೆಲೆಯಲ್ಲಿ ಅವರ ಪ್ರಾತಿನಿಧಿಕ ಕಾವ್ಯವನ್ನು ಇಲ್ಲಿ ನೋಡಲು ಯತ್ನಿಸಲಾಗಿದೆ’ಎಂದಿದ್ದಾರೆ.

About the Author

ಕಾ.ವೆಂ. ಶ್ರೀನಿವಾಸಮೂರ್ತಿ
(06 September 1969)

ಡಾ. ಕಾ. ವೆಂ. ಶ್ರೀನಿವಾಸಮೂರ್ತಿ ಅವರು ಬೆಂಗಳೂರು ಉತ್ತರಕಾವಲು ಭೈರಸಂದ್ರದವರು. ಉಪನ್ಯಾಸಕರಾಗಿದ್ದಾರೆ. ಚಂದ್ರತಾರೆ ಊರಿನಲ್ಲಿ, ಹೃದಯ ವಿಹಾರಿ, ಬದುಕು, ಕಾವ್ಯಕೋಗಿಲೆ, ನಿತ್ಯಶ್ರಾವಣ, ಅಭಿಮಾನದ ಹಣತೆ, ಮಣ್ಣಿನ ದೋಣಿ, ಆಯ್ದ ಭಾವಗೀತೆಗಳು (ಕಾವ್ಯ), ನೆಲದ ಕಣ್ಣ, ಮೌನ ಮಾತಾದಾಗ, ಕನ್ನಡ ರಂಗಭೂಮಿ, ಕನ್ನಡ ಚಳುವಳಿ ಮತ್ತು ಚಿಂತನ, ಉರಿಯಪೇಟೆ (ವಿಮರ್ಶೆ), ಕನ್ನಡ ಸಾಹಿತ್ಯ ಮತ್ತು ಕರ್ನಾಟಕತ್ವ, ಅಭಿರಾಮ, ಕನ್ನಡ ಭೇರಿ, ಬಂಡಾಯ ಕಾಲು ಶತಮಾನ (ಸಂಪಾದನೆ), ಕನ್ನಡ ಕಾವ್ಯದಲ್ಲಿ ನಾಡು ನುಡಿ ಚಿಂತನೆ (ಪಿಎಚ್‌ಡಿ ಮಹಾಪ್ರಬಂಧ). ...

READ MORE

Related Books