ಹಸ್ತಪ್ರತಿ ವ್ಯಾಸಂಗ-15

Author : ವೀರೇಶ ಬಡಿಗೇರ

Pages 200

₹ 140.00




Year of Publication: 2018
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ, ಹಂಪಿ-583 276

Synopsys

ಐತಿಹಾಸಿಕವಾಗಿ ನಾಡಿನ ಬಹುದೊಡ್ಡ ಸಂಪತ್ತು ಎಂದರೆ ಹಸ್ತಪ್ರತಿಗಳು. ಇವುಗಳ ಸಂರಕ್ಷಣೆ ಅಗತ್ಯ. ಆದ್ದರಿಂದ, ಹಸ್ತಪ್ರತಿಗಳ ಸಮ್ಮೇಳನವನ್ನು ಅಖಿಲ ಕರ್ನಾಟಕದ ಮಟ್ಟದಲ್ಲಿ ಕನ್ನಡ ವಿಶ್ವವಿದ್ಯಾಲಯವು ರಾಜ್ಯದ ಬೇರೆ ಬೇರೆ ಪ್ರದೇಶದಲ್ಲಿ ಆಯೋಜಿಸುತ್ತಾ ಬಂದಿದೆ. ಇಲ್ಲಿ ಮಂಡಿತವಾದ ಪ್ರಬಂಧಗಳ ಸಂಗ್ರಹವೇ ’ಹಸ್ತಪ್ರತಿ ವ್ಯಾಸಂಗ-15' ಸಂಪುಟವಾಗಿದೆ.

About the Author

ವೀರೇಶ ಬಡಿಗೇರ
(04 April 1966)

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ವೀರೇಶ ಬಡಿಗೇರ, ಕನ್ನಡದ ಹಸ್ತಪ್ರತಿ ತಜ್ಞರಲ್ಲಿ ಒಬ್ಬರು. 1966 ಏಪ್ರಿಲ್‌ 4 ರಂದು ಜನಿಸಿದರು. ಎಂ. ಎ., ಪಿಎಚ್.ಡಿ. ಹಾಗೂ ಬಿ.ಇಡ್, ಡಿಪ್ಲೊಮಾ ಇನ್ ಎಪಿಗ್ರಾಫಿ ಮಾಡಿದ್ದು, ಕನ್ನಡ ಸಾಹಿತ್ಯ, ಸಂಸ್ಕೃತಿ, ಜಾನಪದ, ಸಂಗೀತ, ತಂತ್ರಜ್ಞಾನ ಆಸಕ್ತಿ ಕ್ಷೇತ್ರಗಳು. 28 ವರ್ಷ ಕಾಲ ಬೋಧನೆ ಹಾಗೂ ಸಂಶೋಧನೆಯ ಅನುಭವ ಇದೆ. ಬಾಗಲಕೋಟೆಯ  ಪಿ. ಎಂ. ನಾಡಗೌಡಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ  ಅರೆಕಾಲಿಕ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದರು. 1992 ರಿಂದ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಶೋಧನ ಸಹಾಯಕರಾಗಿ ಕೆಲಸಕ್ಕೆ ಸೇರಿದರು. 1996 ಆಗಸ್ಟನಿಂದ ಹಸ್ತಪ್ರತಿಶಾಸ್ತ್ರ ವಿಭಾಗದಲ್ಲಿಉಪನ್ಯಾಸಕರಾದರು. 1996ರಲ್ಲಿ ಉತ್ತರ ಕರ್ನಾಟಕದ ಜಾನಪದ ...

READ MORE

Related Books