ಚರಿತ್ರೆಯ ಬಹುದೊಡ್ಡ ಆಸ್ತಿಯಂತಿರುವ ಹಸ್ತಪ್ರತಿಗಳನ್ನು ರಕ್ಷಿಸಿಕೊಳ್ಳಬೇಕೆಂಬ ಮನೋಭಾವಕ್ಕಿಂತಲೂ ಅವುಗಳನ್ನು ದೇವರ ಜಗುಲಿ ಮೇಲಿಟ್ಟು ಪೂಜಿಸುವುದರಲ್ಲೇ ಸಾರ್ಥಕತೆ ಇದೆ ಎಂದು ಈವರೆಗೆ ಪೂರ್ವಜರು ನಡೆದುಕೊಂಡು ಬಂದಿದ್ದಾರೆ. ಆದರೆ, ಇತಿಹಾಸ ತಿಳಿಯಲು ಹಸ್ತಪ್ರತಿಗಳ ಅಧ್ಯಯನ ಅಗತ್ಯವೇ ಹೊರತು ಅವುಗಳ ಪೂಜೆಯಿಂದ ಸಂಶೋಧನೆ ಮುಂದುವರಿಯದು. ಈ ಹಿನ್ನೆಲೆಯಲ್ಲಿ, ಹಂಪಿಯ ಕನ್ನಡ ವಿ.ವಿ. ಹಸ್ತಪ್ರತಿ ಅಧ್ಯಯನ ವಿಭಾಗವು ಪರಿಷ್ಕರಿಸಿ ನೀಡಿದ್ದದರ ಫಲವೇ ’ಹಸ್ತಪ್ರತಿ ವ್ಯಾಸಂಗ-18' ಕೃತಿ.
©2024 Book Brahma Private Limited.