ಹಿರಿಯ ಲೇಖಕ ಜಿ. ಶ್ರೀನಿವಾಸಮೂರ್ತಿ ಅವರ ಕೃತಿ-ಗಾಳಿಪಟ. ಮೇಲ್ನೋಟಕ್ಕೆ ಗಾಳಿಪಟ ಎಂದಿದ್ದರೂ ಇದರ ಹಾರಾಟದ ಹಿಂದಿರುವ ವೈಜ್ಞಾನಿಕತೆ, ಇದನ್ನೇ ಅಧ್ಯಯನದ ವಸ್ತುವಾಗಿಸಿಕೊಳ್ಳುವ ಬಾಹ್ಯಾಕಾಶ ವಿಜ್ಞಾನಿಗಳು, ಹವಾಮಾನ ಇಲಾಖೆಯ ವಿಜ್ಞಾನಿಗಳು ಹೀಗೆ ಗಾಳಿಪಟವನ್ನು ವೈಜ್ಞಾನಿಕ ವಿಷಯವನ್ನಾಗಿಸಿದ ಈ ಬರಹವು ಕೃತಿಯ ಮೌಲ್ಯವನ್ನು ಹೆಚ್ಚಿಸಿಕೊಂಡಿದೆ. ವಿಮಾನಗಳ ಹಾರಾಟ, ಪಕ್ಷಿಗಳ ಹಾರಾಟ ಹೀಗೆ ಹವಾಮಾನ ಆಧರಿತ ಅಧ್ಯಯನಗಳಿಗೆ ಪೂರಕವಾಗಿ ತಮ್ಮ ಬರಹಗಳನ್ನು ಪರಿವರ್ತಿಸಿಕೊಳ್ಳುವ ಲೇಖಕರು, ವೈಜ್ಞಾನಿಕ ಚಿಂತನೆಗಳನ್ನು ಅತ್ಯಂತ ಸರಳವಾಗಿ ಜನಮಾನಸದಲ್ಲಿ ಮೂಡಿಸುವುದು ಅವರ ಬರಹ ಕಳಕಳಿ.
©2024 Book Brahma Private Limited.