ನೀರಿನ ಸಮಸ್ಯೆ ವಿಷಯಾಧಾರಿತ ಲೇಖನ ಕೃತಿ ʻನಮಾಮಿ ಗಂಗೆʼ. ಕೆ.ಆರ್. ಚಂದ್ರಶೇಖರ್ ಅವರು ಕೃತಿಯ ಲೇಖಕ. ಬೆಂಗಳೂರಿನ ಕೊಳಚೆ ನೀರು, ಕಾರ್ಖಾನೆಗಳ ರಾಸಾಯನಿಕ ತ್ಯಾಜ್ಯ ಮತ್ತು ದಿನನಿತ್ಯ ಬಳಸುವ ನೀರು, ಬಳಸಿದ ನಂತರ ಆ ನೀರು ಏನಾಗುತ್ತದೆ, ಅದರಿಂದಾಗಿ ಅನಾನುಕೂಲಗಳು, ಹರಡುವ ರೋಗಗಳು, ಎದುರಿಸಬೇಕಾದ ಸಮಸ್ಯೆಗಳು ಯಾವುವು ಎಂಬ ವಿಚಾರಗಳನ್ನು ಪ್ರಸ್ತುತ ಪುಸ್ತಕದಲ್ಲಿ ಅನಾವರಣ ಮಾಡಿದ್ದಾರೆ. ಲೇಖಕರು ಸುಮಾರು ನಾಲ್ಕೈದು ವರ್ಷ ರಾಜರಾಜೇಶ್ವರಿ ನಗರ, ಬೈರಮಂಗಲ, ಬೆಳ್ಳಂದೂರು ಮೊದಲಾದ ಪ್ರದೇಶಗಳಲ್ಲಿ ಹಲವಾರು ಕಾರಣಗಳಿಗಾಗಿ ಓಡಾಡುವಾಗ ಅಲ್ಲಿನ ನೀರಿನ ಸ್ಥಿತಿ-ಗತಿ ನೋಡಿ ಆ ಬಗ್ಗೆ ಜನರಿಗೆ ಮಾಹಿತಿ ಜೊತೆಗೆ ಎಚ್ಚರಿಕೆ ನೀಡುವ ಸಲುವಾಗ ಪುಸ್ತಕ ರೂಪದಲ್ಲಿ ತಂದಿದ್ದಾರೆ.
©2024 Book Brahma Private Limited.