ಲೇಖಕ ಟಿ.ಆರ್. ಅನಂತರಾಮು ಅವರು ಮಕ್ಕಳಿಗಾಗಿ ಬರೆದ ಬಹುಮುಖ್ಯ ಕೃತಿ ‘ಮಳೆ’. ಮಳೆ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ? ಮನುಷ್ಯನಷ್ಟೇ ಅಲ್ಲ, ಪ್ರಾಣಿ ಪಕ್ಷಿಗಳಿಗೂ ಮಳೆಯ ಅರಿವಾಗುತ್ತದೆ. ಮಳೆ ನಮ್ಮ ಕೃಷಿಗೆ ಆಧಾರ, ಮಳೆ ನಿರ್ದಿಷ್ಟ ಕಾಲದಲ್ಲೇ ಏಕೆ ಆಗುತ್ತದೆ? ಹೇಗೆ ಆಗುತ್ತದೆ? ಯಾವ ಯಾವ ಅಂಶಗಳು ಮಳೆಗೆ ಕಾರಣವಾಗುತ್ತವೆ ಎಂಬುದನ್ನು ಅತ್ಯಂತ ಸರಳವಾಗಿ ಮಕ್ಕಳಿಗೂ ಅರ್ಥವಾಗುವಂತೆ ಈ ಪುಸ್ತಕದಲ್ಲಿ ಬರೆಯಲಾಗಿದೆ.
ಅಷ್ಟೇ ಅಲ್ಲ, ನಮ್ಮ ಪ್ರಾಚೀನರು 27 ನಕ್ಷತ್ರಗಳನ್ನು ಮಳೆ ನಕ್ಷತ್ರಗಳೆಂದೇ ಗುರುತಿಸಿದ್ದಾರೆ. ಈಗಲೂ `ಭರಣಿ ಮಳೆ ಬಿದ್ದರೆ ಧರಣಿ ತುಂಬ ಬೆಳೆ’ ಎಂದು ರೈತರು ಹೇಳುತ್ತಾರೆ. ಹಿಂಗಾರು ಮಳೆ ಮತ್ತು ಮುಂಗಾರು ಮಳೆಯ ವೈಶಿಷ್ಟ್ಯವೇನು? ಕೃತಕ ಮಳೆಯನ್ನು ಸೃಷ್ಟಿಸುವುದು ಹೇಗೆ ಎಂಬೆಲ್ಲ ಅಂಶವನ್ನು ಈ ಕೃತಿಯಲ್ಲಿ ಹೇಳಲಾಗಿದೆ. ಜೊತೆಗೆ ಮನುಷ್ಯ ವಾಯುಗೋಳವನ್ನು ಹಾಳುಮಾಡಿ ಹುಳಿಮಳೆ ಬೀಳುವಂತೆ ಮಾಡಿದ್ದಾನೆ. ಇಂಥವನ್ನು ಹೇಗೆ ತಡೆಯಬಹುದು ಎಂಬ ಸೂಚನೆಯೂ ಇಲ್ಲಿದೆ. ಮಳೆಯ ಕುರಿತು ಪ್ರಾಥಮಿಕ ಅರಿವು ಪಡೆಯಲು ಈ ಕೃತಿ ನೆರವಿಗೆ ಬರುತ್ತದೆ.
©2025 Book Brahma Private Limited.