ಖ್ಯಾತ ಪರಿಸರವಾದಿ ನಾಗೇಶ ಹೆಗಡೆ ಅವರು ಭೂಮಿ ಹಾಗೂ ಪರಿಸರ ಇವುಗರಳ ಸಂರಕ್ಷಣೆಯ ಅಗತ್ಯ ಹಾಗೂ ಅನಿವಾರ್ಯತೆಯನ್ನು ಸಮರ್ಥಿಸಿಕೊಳ್ಳುವ ವಿಚಾರಗಳ ಬರಹಗಳನ್ನು ಒಳಗೊಂಡ ಕೃತಿ-ಇರುವುದೊಂದೇ ಭೂಮಿ. ಈ ಭೂಮಿಯು ಕೇವಲ ಮನುಷ್ಯರ ವಾಸಸ್ಥಳ ಮಾತ್ರವಲ್ಲ; ಸಕಲ ಜೀವರಾಶಿಗಳಿಗೂ ವಾಸಸ್ಥಳವಾಗಿದೆ. ಪ್ರತಿ ಜೀವಿಗೂ, ಕ್ರಿಮಿಕೀಟಕ್ಕೂ, ಈ ಭೂಮಿಯ ಮೇಲಿರಲು ಎಲ್ಲ ಹಕ್ಕುಗಳಿವೆ. ಈ ಭೂಮಿಯ ಪರಿಸರವನ್ನು ಹಾಳು ಮಾಡುತ್ತಿರುವ ಮನುಷ್ಯರ ದುರಾಸೆಯ ವಿರುದ್ಧ ಎಚ್ಚರಿಸುವ ಪರಿಸರ ಕಾಳಜಿಯ ಬರಹಗಳಿವೆ. ಭೂಮಿಯ ಮೇಲಿನ ಹಾಗೂ ಗರ್ಭದಲ್ಲಿರುವ ಪ್ರತಿ ವಸ್ತುವು ಭೂಮಿಯ ಸಮತೋಲನ ಮಾತ್ರವಲ್ಲ; ಜೀವಸಂಕಲನದ ಆರೋಗ್ಯಕ್ಕೂ ಪೂರಕವಾಗಿವೆ ಎಂಬ ಅಂಶವನ್ನು ಇಲ್ಲಿಯ ಬರಹಗಳು ಪ್ರತಿಪಾದಿಸುತ್ತವೆ.
©2024 Book Brahma Private Limited.