ಕಾಲಗರ್ಭಕ್ಕೆ ಕೀಲಿಕೈ

Author : ಟಿ. ಆರ್. ಅನಂತರಾಮು

Pages 142

₹ 100.00




Year of Publication: 1999
Published by: ಬ್ಯಾಲದಕೆರೆ ಪ್ರಕಾಶನ
Address: ಜಿ. ನಾಗತಿಹಳ್ಳಿ ಅಂಚೆ, ಬೆಳ್ಳೂರು ಹೋಬಳಿ, ನಾಗಮಂಗಲ ತಾ., ಮಂಡ್ಯ ಜಿಲ್ಲೆ

Synopsys

`ಕಾಲಗರ್ಭಕ್ಕೆ ಕೀಲಿಕೈ’ ವಿಜ್ಞಾನ-ವಿಚಾರಗಳ ಪ್ರಬಂಧ ಸಂಕಲನ. ಇಲ್ಲಿಯ ಲೇಖನಗಳ ಹರವು ದೊಡ್ಡದು. ನಿಗೂಢ ಜೀವಿಯ ಬೆನ್ನುಹತ್ತಿದ ವಿಜ್ಞಾನಿಗಳ ಸಾಹಸಗಾಥೆ ಓದುಗರನ್ನು ಭಿನ್ನ ಪ್ರಪಂಚಕ್ಕೆ ಒಯ್ಯುತ್ತದೆ. ಅತಿವೃಷ್ಟಿ ಇದ್ದರೂ ಮರುಭೂಮಿಯಾಗಿರುವ ಚಿರಾಪುಂಜಿಯ ಕಟು ವಾಸ್ತವತೆಗೆ ಇಲ್ಲಿ ಕನ್ನಡಿ ಹಿಡಿದಿದೆ.

ಹಿಮಯುಗ ಏಕೆ ಬರುತ್ತದೆ? ಬಾನಿನಲ್ಲಿ ಓಜೋನ್ ಪದರು ತೂತಾದರೆ ನಮ್ಮ ಬದುಕಿಗೆ ಅದರಿಂದೇನು? ಕಾಜಿರಂಗದ ಘೇಂಡಾಗಳ ಭವಿಷ್ಯ ಯಾರ ಕೈಯ್ಯಲ್ಲಿದೆ? ಪ್ರಳಯದ ಭೂತ ಏಕೆ ಜನರನ್ನು ಆಗಾಗ್ಗೆ ಕಾಡುತ್ತದೆ? ನಾನ್ನೂರರವತ್ತು ಕೋಟಿ ವರ್ಷಗಳ ಭೂಚರಿತ್ರೆಯ ರಹಸ್ಯವನ್ನು ಯಾವ ಕೀಲಿಕೈನಿಂದ ಒಡೆಯಬೇಕು? ಅಂಟಾರ್ಕ್‍ಟಿಕ ಅನ್ವೇಷಣೆಯಲ್ಲಿ ಎದುರಾಗುವ ಸವಾಲುಗಳು ಯಾವುವು? ತಲಕಾಡೇಕೆ ಮರಳಾಗಿದೆ? ಇಂಥ ಕುತೂಹಲಕಾರಿ ಪ್ರಶ್ನೆಗಳಿಗೆ ವೈಜ್ಞಾನಿಕವಾಗಿ ಒಪ್ಪುವ ವಿವರಣೆಗಳು ಈ ಸಂಗ್ರಹದಲ್ಲಿದೆ.

ವಿಜ್ಞಾನಕ್ಕಾಗಿಯೇ ತಮ್ಮನ್ನು ತಾವು ಅರ್ಪಿಸಿಕೊಂಡಿರುವ ಕೆಲವು ಸಾಧಕರ ವ್ಯಕ್ತಿ ಚಿತ್ರಣಗಳೂ ಇಲ್ಲಿವೆ. ವಿಜ್ಞಾನವೆಂದರೆ ಕೇವಲ ಅಂಕಿ-ಅಂಶಗಳ ನೀರಸ ಪ್ರತಿಪಾದನೆಯಲ್ಲ; ವಿಜ್ಞಾನಕ್ಕೂ ಆತ್ಮೀಯವಾದ ಪರಿಭಾಷೆ ಇದೆ ಎಂಬುದನ್ನು ಈ ಸಂಗ್ರಹದ ಲೇಖನಗಳು ಮತ್ತೆ ಮತ್ತೆ ನೆನಪಿಸುತ್ತವೆ. ಈ ಕೃತಿಗೆ ವಿಜ್ಞಾನ ವಿಭಾಗದಲ್ಲಿ 1999ರ ಶ್ರೇಷ್ಠ ಕೃತಿ ಎಂದು ಗೊರೂರು ಸಾಹಿತ್ಯ ಪ್ರಶಸ್ತಿ ದೊರೆತಿದೆ

About the Author

ಟಿ. ಆರ್. ಅನಂತರಾಮು
(03 August 1949)

ಭೂ ವಿಜ್ಞಾನಿ, ಸಂಶೋಧಕ, ಅಂಕಣಕಾರ, ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರು ಜನಿಸಿದ್ದು 1949 ಆಗಸ್ಟ್ 3ರಂದು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ತಾಳಗುಂದದಲ್ಲಿ.ತಾಳಗುಂದ ರಾಮಣ್ಣ ಅನಂತರಾಮು ಅವರ ಪೂರ್ಣ ಹೆಸರು. ಸಿರಾದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರ್ಣಗೊಳಿಸಿದ ಅವರು ಸಿರಾದ ಮುನಿಸಿಪಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದಾರೆ. ಆನಂತರ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎನ್ಸಿ(ಜಿಯಾಲಜಿ) ಪದವಿ ಪಡೆದಿದ್ದಾರೆ.  ಭೂ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ನಂತನ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ರಾಜ್ಯದ ನಾನಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ್ದಾರೆ.  ...

READ MORE

Related Books