‘ಪರಿಸರವೆಂಬುದು ಅಪ್ಪನಿಂದ ಬಂದ ಆಸ್ತಿಯಲ್ಲ; ಅದು ಮಕ್ಕಳಿಂದ ಪಡೆದ ಸಾಲ’ ಎಂಬ ಉಪಶೀರ್ಷಿಕೆಯ ಮೂಲಕ ದಿನಂಪ್ರತಿಯೂ ಪರಿಸರ ಕಳಕಳಿ ತೋರುವುದು ಅಗತ್ಯ ಎಂಬ ಚಿಂತನೆಯನ್ನು ಹುರಿಗೊಳಿಸಿದ ಹಾಗೂ ಚಿಂತಕ ನಾಗೇಶ ಹೆಗಡೆ ಅವರು ಬರೆದ ಕೃತಿ-ಪ್ರತಿದಿನ ಪರಿಸರ ದಿನ. ಕನ್ನಡ ನಾಡಿನ ನೈಸರ್ಗಿಕ ತಾಣಗಳು ತಮ್ಮ ಸೌಂದರ್ಯವನ್ನು ಈಗ ಉಳಿಸಿಕೊಂಡಿಲ್ಲ. ಕನ್ನಡನಾಡಿನ ಸಾಮೂಹಿಕ ಆಸ್ತಿಗಳನ್ನು ಇನ್ನಷ್ಟು ಸಮೃದ್ಧಗೊಳಿಸಲು ಆಗದಿದ್ದರೆ ಕಡೇ ಪಕ್ಷ ಶಿಥಿಲಗೊಳ್ಳದಂತೆ ಕಾಪಾಡಬಲ್ಲವರು ಇಂದು ಬೇಕು. ಸರಕು ಸಂಸ್ಕೃತಿಯ ಆಗರವಾಗಿರುವ ನಗರಗಳು ತಮ್ಮ ತಿಪ್ಪೆಯನ್ನು ಗ್ರಾಮಪರಿಸರಕ್ಕೆ ಸುರಿಯದಂತೆ ತಡೆಯಬಲ್ಲವರು ಬೇಕು. ಅರಣ್ಯ, ಕಡಲತೀರ, ಕೆರೆತೊರೆಗಳ ಜೀವಿವೈವಿಧ್ಯಗಳನ್ನು ಸಂರಕ್ಷಿಸುವವರು ಬೇಕು. ಅಂಥ ಹೊಸ ಪೀಳಿಗೆಯೊಂದನ್ನು ಸೃಷ್ಟಿಸಬೇಕಾದ ತುರ್ತಿನಲ್ಲಿರುವ ನಾವು ವರ್ಷಕ್ಕೆ ಕೇವಲ ಒಂದೇ ದಿನವನ್ನು ‘ಪರಿಸರ ದಿನ’ವನ್ನಾಗಿ ಆಚರಿಸಿದರೆ ಸಾಕೆ? ವಿಜ್ಞಾನ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ‘ಇರುವುದೊಂದೇ ಭೂಮಿ’, ‘ಮುಷ್ಟಿಯಲ್ಲಿ ಮಿಲೆನಿಯಂ’, ‘ಸುರಿಹೊಂಡ ಭರತಖಂಡ’, ‘ಟಿಪ್ಪೂ ಖಡ್ಗದ ನ್ಯಾನೊ ಕಾರ್ಬನ್’, ‘ಅಭಿವೃದ್ಧಿಯ ಅಂಧಯುಗ’, ‘ಕೊಪೆನ್‌ಹೇಗನ್ ಋತುಸಂಹಾರ’ ಮುಂತಾದ ಗ್ರಂಥಗಳನ್ನು ರಚಿಸಿದ ನಾಗೇಶ ಹೆಗಡೆ, ವಿಜ್ಞಾನದ ಕ್ಲಿಷ್ಟ ವಿಷಯಗಳನ್ನು ಪರಿಸರದ ಸಂಕೀರ್ಣ ಸಂಬಂಧಗಳನ್ನೂ ಮನಮುಟ್ಟುವ ಶೈಲಿಯಲ್ಲಿ ನೀಡುವ ಕೃತಿ ಇದು.
©2025 Book Brahma Private Limited.