ಸಮಂತ್ ಸುಬ್ರಮಣಿಯನ್ ಅವರ ಪ್ರವಾಸ ಕಥನ ‘ಫಾಲೋಯಿಂಗ್ ಫಿಶ್’ ಆಂಗ್ಲ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ -ಲೇಖಕಿ ಸಹನಾ ಹೆಗಡೆ. ಕೃತಿಗೆ ಬೆನ್ನುಡಿ ಬರೆದಿರುವ ರಾಮಚಂದ್ರ ಗುಹಾ “ಈ ಅನನ್ಯ ಪ್ರವಾಸ ಕಥನವು, ಸೃಜನಶೀಲ ಪರಿಕಲ್ಪನೆ ಮತ್ತು ಕೌಶಲ್ಯಪೂರ್ಣ ನಿರ್ವಹಣೆಯನ್ನು ಹೊಂದಿದೆ. ಭಾರತ ಭೂಖಂಡದಲ್ಲಿ ಮೀನುಗಾರಿಕೆ ಮತ್ತು ಮೀನು ಊಟದ ಕ್ರಮವು ಹೇಗೆ ತನ್ನದೇ ಆದ ಸಂಸ್ಕೃತಿ ಮತ್ತು ಪರಿಸರಗಳನ್ನು ರೂಪಿಸಿದೆ ಎಂಬುದನ್ನು ಈ ಅದ್ಭುತ ಒಳನೋಟಗಳನ್ನುಳ್ಳ ಲೇಖನಗಳ ಮೂಲಕ ಸಮಂತ್ - ಸುಬ್ರಮಣಿಯನ್ ಕಟ್ಟಿ ಕೊಟ್ಟಿದ್ದಾರೆ. ಹಲವಾರು ಭೂಪ್ರದೇಶ ಮತ್ತು ಕರಾವಳಿಗಳ ವೈವಿಧ್ಯಮಯ ಚಿತ್ರಣವನ್ನು ಹೊಂದಿರುವ ಈ ಕೃತಿಯು ಸಮೃದ್ದ ಪಾತ್ರಪ್ರಪಂಚವನ್ನೂ ಒಳಗೊಂಡಿದೆ. ಹದಮೀರದ ಇಲ್ಲಿಯ ಅಭಿರುಚಿಪೂರ್ಣ ಭಾಷೆ ಮತ್ತು ನುಡಿಗಟ್ಟುಗಳು ಘನತೆಯಿಂದ ಕೂಡಿವೆ. ಆಪ್ತ ಭಾವದ ಈ ಬರೆವಣಿಗೆಗೆ ಸಾಕಷ್ಟು ಕೋಮಲತೆಯೂ ಇದೆ” ಎಂದಿದ್ದಾರೆ.
'ಫಾಲೋಯಿಂಗ್ ಫಿಶ್’ ಕೃತಿಯ ಕುರಿತು ಲೇಖಕಿ ಸಹನಾ ಹೆಗಡೆ ಅವರ ಮಾತುಗಳು ಇಲ್ಲಿವೆ.
©2024 Book Brahma Private Limited.