ಬಳ್ಳಾರಿ ಪರಿಸರದ ಸಾಂಸ್ಕೃತಿಕ ಪರಂಪರೆ

Author : ವಾಸುದೇವ ಬಡಿಗೇರ

Pages 366

₹ 260.00




Year of Publication: 2012
Published by: ಪ್ರಸಾರಾಂಗ
Address: ಕನ್ನಡ ವಿ.ವಿ.ಹಂಪಿ, ವಿದ್ಯಾರಣ್ಯ-583276

Synopsys

ಡಾ. ವಾಸುದೇವ ಬಡಿಗೇರ ಅವರ ಸಂಶೋಧನಾತ್ಮಕ ಕೃತಿ ‘ಬಳ್ಳಾರಿ ಪರಿಸರದ ಸಾಂಸ್ಕೃತಿಕ ಪರಂಪರೆ’. ಸಮಗ್ರ ಇತಿಹಾಸದಲ್ಲಿ ಪ್ರಾದೇಶಿಕ ಮತ್ತು ಸ್ಥಳೀಯ ವಿಷಯಗಳು ಗುರುತಿಸಿಕೊಳ್ಳುವುದು ತೀರ ಕಡಿಮೆ. ಸ್ಥಳೀಯ ಘಟನಾವಳಿಗಳು. ಆಲೋಚನೆಗಳು ಹಾಗೂ ಸಾಂಸ್ಕೃತಿಕ ಸಂಬಂಧಗಳನ್ನು ಸಂಶೋಧನೆ, ಅಧ್ಯಯನಗಳ ಮೂಲಕ ಸಮಗ್ರವಾಗಿ ನಿರೂಪಿಸುವವರೆಗೆ ರಾಷ್ಟ್ರದ ಇತಿಹಾಸ ಪರಿಪೂರ್ಣವಾಗುವುದಿಲ್ಲ. ಆದ್ದರಿಂದ ನಿರ್ಲಕ್ಷಿತ ಪ್ರದೇಶದ ಮತ್ತು ಸ್ಥಳೀಯ ಇತಿಹಾಸದ ಕಡೆಗೆ ಹೆಚ್ಚು ಗಮನಹರಿಸಬೇಕು. ನಾಡಿನ ಇತರೆ ಪ್ರದೇಶಗಳಿಗೆ ಹೋಲಿಸಿದರೆ ಗ್ರಾನೈಟ್ ಶಿಲೆ ಮತ್ತು ಕಬ್ಬಿಣ ಅದಿರನ್ನೊಳಗೊಂಡ ಬೆಟ್ಟಗಳು, ತುಂಗಭದ್ರಾ ನದಿ ನೀರು, ಕಾಡು ಮೊದಲಾದವುಗಳಿಂದ ಕೂಡಿದ ಇಲ್ಲಿಯ ನಿಸರ್ಗ ಸಂಪತ್ತು ಜನ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿತು. ಇದರಿಂದ ಬಹು ಪ್ರಾಚೀನ ಕಾಲದಲ್ಲಿಯೇ ಪಂಪಾ, ಕಿಷ್ಕಿಂಧ, ಕಾರ್ತಿಕೇಯ ಮತ್ತು ಮೈಲಾರ ಕ್ಷೇತ್ರಗಳು ಅನೇಕ ನಂಬಿಕೆ ಸಂಪ್ರದಾಯಗಳನ್ನು ಮೈಗೂಡಿಸಿಕೊಂಡು ಬೆಳವಣಿಗೆ ಹೊಂದಿದವು. ಇವುಗಳೊಂದಿಗೆ ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ, ದೇವಾಲಯ ಮತ್ತು ಮೂರ್ತಿಶಿಲ್ಪ ಕಲೆ ಸಾಂಸ್ಕೃತಿಕ ಮಹತ್ವವನ್ನು ಪಡೆದಿವೆ. ಈ  ವಲಯಗಳನ್ನು ಸಮಗ್ರವಾಗಿ ವಿಶ್ಲೇಷಣೆಗೆ ಒಳಪಡಿಸಿ ಮಹತ್ವದ ಗ್ರಂಥವನ್ನು ರಚಿಸಿದ್ದಾರೆ.

About the Author

ವಾಸುದೇವ ಬಡಿಗೇರ

ಲೇಖಕ ವಾಸುದೇವ ಬಡಿಗೇರ ಅವರು ಮೂಲತಃ ಹೊಸಪೇಟೆಯವರು. 1968 ಜೂನ್ 1ರಂದು ಜನನ. ಅವರು ಎಂ.ಎ.(ಪ್ರಾಚೀನ ಭಾರತೀಯ ಇತಿಹಾಸ ಮತ್ತು ಶಾಸನಶಾಸ್ತ್ರ), ಎಂ.ಎ. (ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ್ಫ) ಎಂ.ಫಿಲ್., ಪಿಎಚ್.ಡಿ., ಡಿಪ್ಲೊಮಾ ಇನ್ ಎಪಿಗ್ರಫಿ ವಿದ್ಯಾರ್ಹತೆಯನ್ನು ಹೊಂದಿದ್ದಾರೆ. ಇತಿಹಾಸ, ಪುರಾತತ್ವಶಾಸ್ತ್ರ, ಸಂಸ್ಕೃತಿ ಕಲೆ ಮತ್ತು ವಾಸ್ತು ಶಿಲ್ಪ ಅವರ ಆಸಕ್ತಿಯ ಅಧ್ಯಯನ ಕ್ಷೇತ್ರಗಳಾಗಿವೆ.  ಕೃತಿಗಳು: ಸಂಡೂರು ಪರಿಸರದ ಕಾರ್ತಿಕೇಯ ತಪೋವನ, ಶಿರಸಂಗಿ ಕಾಳಮ್ಮ, ಕರ್ನಾಟಕ ದೇವಾಲಯ ಕೋಶ ವಿಜಾಪುರ ಜಿಲ್ಲೆ, ಕರ್ನಾಟಕ ದೇವಾಲಯ ಕೋಶ ಬಳ್ಳಾರಿ ಜಿಲ್ಲೆ, ಸ್ಥಳೀಯ ಚರಿತ್ರೆ ಮತ್ತು ಪುರಾತತ್ವ ಮಾಲೆ-೫ ಬಸವನ ಬಾಗೇವಾಡಿ, ಬಳ್ಳಾರಿ ಜಿಲ್ಲೆಯ ಸಾಂಸ್ಕೃತಿಕ ಪರಂಪರೆ ಭಾಗ-೧, ಕರ್ನಾಟಕ ದೇವಾಲಯ ಕೋಶ : ...

READ MORE

Related Books