ವಿಜಯನಗರ ಸಾಮ್ರಾಜ್ಯದ ದೊರೆ ಕೃಷ್ಣದೇವರಾಯನು ಉತ್ತಮ ಆಡಳಿತಗಾರನಲ್ಲದೆ ಒಳ್ಳೆಯ ಸಹೃದಯಿ ಕವಿಯಾಗಿದ್ದನು ಎಂಬುದನ್ನು ಶೃತಪಡಿಸುವ ಆತನ ಕಾವ್ಯ ʻಆಮುಕ್ತಮಾಲ್ಯದ' ದ ಗದ್ಯಾನುವಾದ ʻಶ್ರೀಕೃಷ್ಣದೇವರಾಯನ ಆಮುಕ್ತಮಾಲ್ಯದʼ. ಮುಖ್ಯವಾಗಿ ರಾಜನೀತಿಯನ್ನು ಹೇಳುವ ಈ ಕೃತಿಯಲ್ಲಿ ಸಮಕಾಲೀನ ಬದುಕಿನ ಸೂಕ್ಷ್ಮ ಅವಲೋಕನವಿದೆ. ಜೊತೆಗೆ ರಾಜಕೀಯ ಸ್ಪಂದನವೂ ಇದೆ. ಈ ಕಾರಣಗಳಿಗಾಗಿ ಅಮುಕ್ತಮಾಲ್ಯದ ಇಂದಿಗೂ ಮಹತ್ವವೆನಿಸುತ್ತದೆ. ಲೇಖಕಿ ನಿರುಪಮಾ ಅವರು ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
©2024 Book Brahma Private Limited.