ಶ್ರೀನಿವಾಸ ಎ. ಜಿ. ಅವರ ‘ಇತಿಹಾಸ ಮತ್ತು ಪುರಾತತ್ವ’ ಕೃತಿಯ ಲೇಖನಗಳಲ್ಲಿ ಪುರಾತತ್ವಶಾಸ್ತ್ರಕ್ಕೆ ಸಂಬಂಧಿಸಿದ ಅಮ್ಮನಘಟ್ಟ ಪರಿಸರದ ಪ್ರಾಗೈತಿಹಾಸಿಕ ಕುರುಹುಗಳು, ಬಿದರೆಯ ಪ್ರಾಚ್ಯಾವಶೇಷಗಳು, ಅಮ್ಮನಘಟ್ಟದ ಪ್ರಾಚ್ಯಾವಶೇಷಗಳು, ನೂತನ ಶಿಲಾಯುಗದ ನೆಲೆಯಾಗಿ ಮೂಗನಾಯಕನ ಕೋಟೆ ಮುಂತಾದ ಲೇಖನಗಳಿವೆ. ಕೃತಿಗೆ ಮುನ್ನುಡಿ ಬರೆದ ಪ್ರೊ. ಎಂ.ಜಿ. ಮಂಜುನಾಥ ಅವರು ‘ಪುರಾತತ್ವ ಶಾಸ್ತ್ರ, ಶಾಸನಸಾಸ್ತ್ರ, ಇತಿಹಾಸ, ವಾಸ್ತುಶಿಲ್ಪ, ಮೂರ್ತಿಶಿಲ್ಪ, ಸಮಾಜಶಾಸ್ತ್ರ, ಧರ್ಮಶಾಸ್ತ್ರ, ಸಂಸ್ಕೃತಿ ಹೀಗೆ ಬಹು ಶಿಸ್ತೀಯ ಜ್ಞಾನ ಶಾಖೆಗಳನ್ನು ಕುರಿತ ಸಂಶೋಧನಾ ಲೇಖನಗಳು ಈ ಗ್ರಂಥದಲ್ಲಿ ಸೇರ್ಪಡೆಗೊಂಡಿವೆ. ಇಲ್ಲಿಯ ಲೇಖನಗಳನ್ನು ಗಮನಿಸಿದರೆ ಶ್ರೀನಿವಾಸ ಅವರು ಭವಿಷ್ಯದಲ್ಲಿ ಉತ್ತಮ ಸಂಶೋಧಕರಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತವೆ. ಪುರಾತತ್ವಶಾಸ್ತ್ರ ಸಂಶೋಧಕರಿಗೆ ಇರಬೇಕಾದ ತಾಳ್ಮೆ, ಬಹುಶಿಸ್ತೀಯ ಜ್ಞಾನ, ಪರಿಶ್ರಮ ಇವೆಲ್ಲವೂ ಇಲ್ಲಿಯ ಕ್ಷೇತ್ರ ಕಾರ್ಯಾಧಾರಿತ ಲೇಖನಗಳಲ್ಲಿ ಕಂಡು ಬರುತ್ತಿವೆ’ ಎಂದರು ಪ್ರಶಂಸಿಸಿದ್ದಾರೆ.
©2025 Book Brahma Private Limited.