ಅಸುರ

Author : ನಾಗ ಎಚ್. ಹುಬ್ಳಿ

Pages 148

₹ 120.00




Year of Publication: 2021
Published by: ಎಚ್.ಡಿ ಪ್ರಶಾಂತ
Address: ಕನ್ನಡ ಯುನಿವರ್ಸಿಟಿ ಹಂಪಿ, ವಿದ್ಯಾರಣ್ಯಪುರ 583276
Phone: 8002203153

Synopsys

’ಅಸುರ’ ಲೇಖಕ ನಾಗ ಹೆಚ್ ಹುಬ್ಳಿ ಅವರ ಆದಿವಾಸಿ ಸಮುದಾಯದ ಇಲ್ಲವೇ ಜನಾಂಗೀಯ ಅಧ್ಯಯನ ಕೃತಿ. ಆದಿಮ ಸಂಸ್ಕೃತಿಯ ವಾರಸುದಾರರಾದ ” ಅಸುರ ಸಮುದಾಯ” ಒಳಹೊಕ್ಕು ಆದಿವಾಸಿ ಜನಾಂಗದ ಮೂಲಬೇರುಗಳನ್ನು ಹಾಗೂ ಬದುಕನ್ನು ವಿವರಿಸುತ್ತದೆ. 'ಅಸುರ' ಎಂಬ ಆದಿವಾಸಿ ಸಮುದಾಯವು ಝಾರ್ಖಂಡ್ ರಾಜ್ಯದ 22 ಆದಿವಾಸಿ ಸಮುದಾಯಗಳಲ್ಲಿ ಒಂದು. ಈ ಸಮುದಾಯದ ರಾಜಕೀಯ ವ್ಯವಸ್ಥೆ, ಸಾಮಾಜಿಕ ವ್ಯವಸ್ಥೆ, ಆರ್ಥಿಕ ವ್ಯವಸ್ಥೆ ಹಾಗೂ ಧಾರ್ಮಿಕ ವ್ಯವಸ್ಥೆಯನ್ನು ಅತ್ಯಂತ ಕುತೂಹಲದಿಂದ ಲೇಖಕರು ವಿಶ್ಲೇಷಿಸಿದ್ದಾರೆ. ಬಹುತೇಕ ಆದಿವಾಸಿಗಳಲ್ಲಿ ಅನಕ್ಷರತೆ, ಬಡತನಗಳ ಜೊತೆಗೆ ಐತಿಹಾಸಿಕ ಪ್ರಜ್ಞೆಯ ಕೊರತೆಯನ್ನೂ ಕಾಣುತ್ತೇವೆ. ಈ ಸಂಗತಿಗಳು ಇವರ ಅನಾಗರಿಕತೆಯನ್ನು ಪ್ರತಿನಿಧಿಸಿದರೂ, ಆದಿಮ ಸಂಸ್ಕೃತಿಯ ರಕ್ಷಕರಾಗಿ 'ಅಸುರ' ಸಮುದಾಯದ ಕೊಡುಗೆ ಸಾಂಸ್ಕೃತಿಕ ಅಧ್ಯಯನದ ದೃಷ್ಟಿಯಿಂದ ಬೆಲೆ ಪಡೆದುಕೊಳ್ಳುತ್ತದೆ. ಅಸುರರ ಕುರಿತು ಅರಿಯುವ ಮನಸ್ಸು ರೂಪಿಸಿಕೊಂಡವರಿಗೆ ಇದೊಂದು ಉಪಯುಕ್ತ ಕೃತಿಯಾಗಿದೆ.

About the Author

ನಾಗ ಎಚ್. ಹುಬ್ಳಿ

ಡಾ. ನಾಗ ಎಚ್. ಹುಬ್ಬಿ ಅವರು ಮೂಲತಃ ಹುಬ್ಬಳ್ಳಿಯವರು. ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೋಮ, ಕನ್ನಡದಲ್ಲಿ ಎಂ.ಎ. ಮತ್ತು ಪತ್ರಿಕೋದ್ಯಮದಲ್ಲಿ ಪಿಎಚ್‌ಡಿ ಮಾಡಿದ್ದಾರೆ. ಸದ್ಯ ಇವರು ರಾಂಚಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು. ಹಲವಾರು ಪತ್ರಿಕೆಗಳಿಗೆ ಮತ್ತು ಡಿಜಿಟಲ್ ಮಾಧ್ಯಮಗಳಿಗೆ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಆದಿವಾಸಿಗಳನ್ನು ಕುರಿತು ಕಳೆದ 22 ವರ್ಷಗಳಿಂದ ಝಾರ್ಖಂಡ್, ಬಿಹಾರ, ಒಡಿಸ್ಸಾ, ಪಶ್ಚಿಮ ಬಂಗಾಳ, ಛತ್ತೀಸಗಢ, ನಿಕೋಬಾರ್ ದ್ವೀಪ, ಉತ್ತರಾಖಂಡ ಮುಂತಾದ ರಾಜ್ಯಗಳ ಆದಿವಾಸಿ ತಾಂಡಾಗಳಿಗೆ ನಿರಂತರ ಭೇಟಿ ನೀಡಿ ಜನಾಂಗೀಯ ಅಧ್ಯಯನ ನಡೆಸುತ್ತಿದ್ದಾರೆ. 'ಸರಹುಲ್', 'ಝಾರ್ಖಂಡ್ ಆದಿವಾಸಿ ಬದುಕು, ಆದಿವಾಸಿ ಸಂಸ್ಕೃತಿ' ಮತ್ತು 'ಅಸುರ' ಇವರ ಇತರ ಕೃತಿಗಳು. ...

READ MORE

Related Books