ಸಂಸ್ಕೃತಿ ಚಿಂತಕ, ಲೇಖಕ ರಹಮತ್ ತರೀಕೆರೆ ಅವರು ಕನ್ನಡ-ಕರ್ನಾಟಕದ 15 ವಿಭಿನ್ನ, ವಿಶಿಷ್ಟ ಮತ್ತು ಅನನ್ಯ ಮನಸ್ಸುಗಳೊಂದಿಗೆ ಮುಖಾಮುಖಿಯಾಗಿ ನಡೆಸಿದ ಮಾತುಕತೆ ಸಂಗ್ರಹ ಈ ಪುಸ್ತಕ. ಮಾತುಕತೆಯು ಕೇವಲ ಹರಟೆ-ಚರ್ಚೆಗೆ ಸೀಮಿತವಾದುದಲ್ಲ, ಗಂಭೀರ ಜಿಜ್ಞಾಸೆ, ಲೋಕಜ್ಞಾನದ ಅರಿವಿನ ವಿಸ್ತರಣೆ ಇದೆ. ಶೀರ್ಷಿಕೆಯಲ್ಲಿ ಲೋಕವಿರೋಧಿಗಳು ಎಂದು ಮಾತನಾಡಿಸಿದವರನ್ನು ಕರೆದಿರುವರಾದರೂ ಅದು ಧ್ವನ್ಯಾರ್ಥ. ಜೀವಪರ-ಜನಪರ ಕಾಳಜಿಯಿಂದ ಕೆಲಸ ಮಾಡಿದ- ಚಿಂತಿಸಿದ ವ್ಯಕ್ತಿಗಳ ವ್ಯಕ್ತಿತ್ವವನ್ನು ಅನಾವರಣ ಮಾಡಲಾಗಿದೆ. ಸಾಂಸ್ಕೃತಿಕ- ಸಾಹಿತ್ಯಕ ಸಂದರ್ಶನ ಹೇಗಿರಬೇಕು ಎನ್ನುವುದಕ್ಕೆ ಈ ಬರಹಗಳನ್ನು ನೋಡಬಹುದು. ಪತ್ರಿಕೆಗಳಿಗಾಗಿ ಸಂದರ್ಶನ ಮಾಡಿದಾಗ ಇರುವ ಪದಮಿತಿ ಇಲ್ಲದೇ ಇರುವುದರಿಂದ ಸಂದರ್ಶನ ಸಮಗ್ರವಾಗಿ ಕಾಣಿಸುತ್ತವೆ. ಎಂ.ಡಿ. ನಂಜುಂಡಸ್ವಾಮಿ, ದೇವನೂರ ಮಹಾದೇವ, ಶಂಕರ ಮೊಕಾಶಿ ಪುಣೇಕರ, ಕೆ. ರಾಘವೇಂದ್ರರಾವ್, ಎಲ್. ಬಸವರಾಜು, ಎಚ್. ಗಣಪತಿಯಪ್ಪ, ಎ.ಎನ್. ಮೂರ್ತಿರಾವ್, ಚೆನ್ನವೀರ ಕಣವಿ, ಜಿ.ಎಚ್. ನಾಯಕ, ಕಡಿದಾಳು ಶಾಮಣ್ಣ ಕೆ.ಎಸ್. ನಿಸಾರ್ ಅಹಮದ್, ಸಾರಾ ಅಬೂಬಕರ್, ಮುದೇನೂರ ಸಂಗಣ್ಣ, ನೀಲಗಂಗಯ್ಯ ಪೂಜಾರ, ಷ.ಶೆಟ್ಟರ್ ಅವರ ಜೊತೆಗಿನ ಮಾತುಕತೆ- ಸಂದರ್ಶನ ಈ ಗ್ರಂಥದಲ್ಲಿವೆ.
©2025 Book Brahma Private Limited.