ಡಾ. ವಸುಂಧರಾ ಭೂಪತಿ ಅವರ ’ ಜೀವಸೆಲೆ’ ಕೃತಿಯು ವೈಯಕ್ತಿಕ ಹಾಗೂ ಸಾಮಾಜಿಕ ಆರೋಗ್ಯವನ್ನು ಒಂದೇ ಬಿಂದುವಿನಲ್ಲಿ ಹಿಡಿದಿಡುವ ಅಪರೂಪದ ಪ್ರಯತ್ನವಾಗಿದೆ.
ಹೊಸ ತಲೆಮಾರಿಗೆ ಮಾಡೆಲ್‌ಗಳನ್ನು ಪರಿಚಯಿಸುವ ಸಾಂಸ್ಕೃತಿಕ ಮಹತ್ವದ ಒಂದು ಮುಖ್ಯ ಕೃತಿಯೂ ಹೌದು. ಇಲ್ಲಿ40ಕ್ಕೂ ಅಧಿಕ ಸಂದರ್ಶನ ಮತ್ತು ವ್ಯಕ್ತಿಚಿತ್ರಗಳಿವೆ. ನಾನಾ ಕ್ಷೇತ್ರಗಳಲ್ಲಿ ಖ್ಯಾತರಾಗಿ, ಸಾರ್ವಜನಿಕ ಬದುಕಿನಲ್ಲಿ ಘನತೆಯಿಂದ ಬಾಳಿದವರ ಮಾತುಕತೆಗಳಿವೆ.
103ನೇ ವಯಸ್ಸಿನಲ್ಲಿಎ.ಎನ್.ಮೂರ್ತಿರಾವ್ ದಿನಚರಿಯ ಬಗ್ಗೆ, ಮತ್ತು ಅವರ ಆರೋಗ್ಯ ಮತ್ತು ಲವಲವಿಕೆಯ ಗುಟ್ಟನ್ನು ಅವರು ಈ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ.
ಮತ್ತೊಂದು ಬರಹದಲ್ಲಿ ನಿಟ್ಟೂರು ಶ್ರೀನಿವಾಸರಾವ್ ತಮ್ಮ ಬದುಕಿನ ಸುಖದ ಕಾರಣವನ್ನು ವಿವರಿಸಿದ್ದು, 'ಪ್ರೀತಿ ಏಕಮುಖವಾಗಿರುವುದು ಸಾಧ್ಯವೇ ಇಲ್ಲ. ಪ್ರೀತಿಸೋರು ಜೊತೆಯಲ್ಲಿಇರಬೇಕು... ನಾನು ಯಾರಾರಯರ ಸಂಪರ್ಕದಲ್ಲಿಬಂದೆನೊ ಅವರು ನನ್ನ ಬಗ್ಗೆ ಅಪಾರ ಗೌರವ-ಪ್ರೀತಿ ಹೊಂದಿದ್ದರು. ಹೀಗಾಗಿಯೇ ನನ್ನ ಜೀವನ ಇಷ್ಟೊಂದು ಸುಖಮಯವಾಗಿ ನಡೆದುಕೊಂಡು ಬಂದಿದೆ' ಎಂದಿದ್ದಾರೆ. '
ಹಿರಿಯ ಚಲನಚಿತ್ರ ನಿರ್ದೇಶಕರಾದ ಜಿ.ವಿ.ಅಯ್ಯರ್ ಪ್ರಕಾರ, 'ಮನಸ್ಸು ದೇಹವನ್ನು ಆಳುತ್ತದೆ. ಚಟುವಟಿಕೆಯಿಂದ ಇದ್ದಷ್ಟೂ ಕೆಲಸದಲ್ಲಿ ನಿಮ್ಮನ್ನು ತೊಡಗಿಸಿಕೊಂಡಷ್ಟೂ ಆರೋಗ್ಯ ಚೆನ್ನಾಗಿರುತ್ತದೆ. ಮನಸ್ಸು ದೇಹವನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಎಷ್ಟು ವರ್ಷ ಬೇಕಾದರೂ ಜೀವಿಸಬಹುದು'. ಎಂದಿದ್ದಾರೆ. ಹೀಗೆ ಹಲವಾರು ಗಣ್ಯರ, ವ್ಯಕ್ತಿತ್ವ ಪರಿಚಯ, ಅವರ ಆಲೋಚನೆಗಳನ್ನು ’ಜೀವಸೆಲೆ’ ಕೃತಿ ಒಳಗೊಂಡಿದೆ.
©2024 Book Brahma Private Limited.