ನಾಡಿನ ಕವಿಗಳ ಒಲವು – ನಿಲುವುಗಳನ್ನು ತಿಳಿದುಕೊಳ್ಳಲು, ಅವರ ಲೋಕಾನುಭವದ ಮಹತ್ವವನ್ನು ಗ್ರಹಿಸಲು ಶ್ರೀ ಕುವೆಂಪು ವಿದ್ಯಾಪರಿಷತ್ತಿನ ’ಸಹ್ಯಾದ್ರಿ ಪ್ರಕಾಶನ’ದ ಮೂಲಕ ಪ್ರಕಟಿಸಲಾಗಿದೆ. ಕವಿಗಳನ್ನು ಸಂದರ್ಶಿಸಿದಾಗ ಗುರುತು ಮಾಡಿಕೊಂಡ ಟಿಪ್ಪಣಿಗಳ ಆಧಾರದ ಮೇಲೆ ಈ ಸಂವಾದಗಳು ಮೂಡಿವೆ. ಸಾಧ್ಯವಾದಷ್ಟೂ ಕವಿಗಳ ಮಾತನ್ನು ಬಳಸಿಕೊಳ್ಳುವ ಮೂಲಕ ಹೊರತಂದಿರುವ ಸಂದರ್ಶನ ಮಾಲೆಯ ಮುಖ್ಯ ಸಂದರ್ಶಕರಾದ ಹೆಸರಾಂತ ಸಾಹಿತಿ ದೇ. ಜವರೇ ಗೌಡರು (ದೇ.ಜ. ಗೌ). ಕುವೆಂಪು ಅವರ ಶಿಷ್ಯರಾಗಿ ಅವರ ಮಾರ್ಗದರ್ಶನದಿಂದ ಕನ್ನಡದ ಹೆಸರಾಂತ ಗದ್ಯ ಲೇಖಕರಲ್ಲಿ ಒಬ್ಬರೆನಿಸಿದ್ದಾರೆ.
ಇಲ್ಲಿ ನಡೆಸಿದ ಸಂವಾದದಲ್ಲಿ ಕತೆಗೆ, ಕೃತಿ ರಚನೆಗೆ, ವರ್ಣನೆಗೆ , ಕಲ್ಪನೆಗೆ ಹೆಚ್ಚು ಅವಕಾಶ ನೀಡದೇ ಬದುಕಿನ ಅನೇಕ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡುವ ಸಂವಾದದ ಶೈಲಿಯು ಹರಟೆ, ಸಂಭಾಷಣೆ, ಚರ್ಚೆ, ಪ್ರಶ್ನೋತ್ತರ, ಸಂದರ್ಶನ, ಸವಾಲು, ಇವೇ ಮೊದಲಾದವುಗಳು ಮಾತುಕತೆಯ ವಿವಿಧ ರೂಪಾಂತರಗಳು.
©2024 Book Brahma Private Limited.