‘ಸಮಾಜವಾದಿ ಹೋರಾಟಗಾರರ ಸಂದರ್ಶನ’ ಲೇಖಕ ಪೀರ್ ಬಾಷ ಅವರು ಸಂಪಾದಿಸಿರುವ ಸಂದರ್ಶನಗಳ ಸಂಕಲನ. ಕನ್ನಡ ಸಾಹಿತ್ಯದ ಮೇಲೆ ಲೋಹಿಯಾರ ಪ್ರಭಾವ ಅಪಾರ. ಒಂದು ತಲೆಮಾರಿನ ಕನ್ನಡದ ಅತ್ಯಂತ ಪ್ರತಿಭಾವಂತ ಲೇಖಕರು ಲೋಹಿಯಾರಿಂದ ಪ್ರಭಾವಿತರಾಗಿದ್ದಾರೆ.
ಯು.ಆರ್. ಅನಂತಮೂರ್ತಿ, ಪಿ.ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ಕೆ.ವಿ. ಸುಬ್ಬಣ್ಣ, ಚಂದ್ರಶೇಖರ ಪಾಟೀಲ್ ಮುಂತಾದ ಹಿರಿಯ ಲೇಖಕರು ಲೋಹಿಯಾ ಚಿಂತನೆಗಳನ್ನು ಕರ್ನಾಟಕದಲ್ಲಿ ಸೃಜನಶೀಲವಾಗಿ ವಿಸ್ತರಿಸಿದರು. ಕರ್ನಾಟಕದ ಅಧಿಕಾರ ರಾಜಕಾರಣ, ಚಳವಳಿ ರಾಜಕಾರಣ, ಸಾಹಿತ್ಯ ಮತ್ತು ಸಂಸ್ಕೃತಿ ಚಿಂತನೆಯ ಮೇಲೆ ಲೋಹಿಯಾರ ಪ್ರಭಾವ ಇಂದಿಗೂ ಇದೆ, ಭಾರತದ ಅಗ್ರಗಣ್ಯ ಚಿಂತಕನಿಂದ ಪ್ರಭಾವಿತರಾದ ಕರ್ನಾಟಕದ ಒಂಬತ್ತು ಜನ ಸಮಾಜವಾದಿಗಳನ್ನು ಸಂದರ್ಶಿಸಿ, ಈ ಸಂಪುಟವನ್ನು ರೂಪಿಸಲಾಗಿದೆ. ಕರ್ನಾಟಕದ ಸಾಂಸ್ಕೃತಿಕ ಮತ್ತು ರಾಜಕೀಯ ಚರಿತ್ರೆ ಈ ಸಂದರ್ಶನಗಳಲ್ಲಿ ದಾಖಲಾಗಿದೆ.
©2024 Book Brahma Private Limited.