‘ಒಂದು ಹಿಡಿ ಮುತ್ತು’ ಲೇಖಕ ವಿಜಯಕಾಂತ ಪಾಟೀಲರು ಸಂಪಾದಿಸಿರು ಸಂದರ್ಶನ ಲೇಖನಗಳ ಸಂಕಲನ. ಒಂದು ಕಾಲದಲ್ಲಿ ಲೇಖಕ ಪತ್ರಿಕೋದ್ಯಮದಲ್ಲೂ ಸಕ್ರೀರಾಗಿದ್ದರ ಕುರುಹಾಗಿ ಈ ಸಂದರ್ಶನಗಳ ಸಂಕಲನ ಹೊರಬಂದಿದೆ. ತುಷಾರ, ಅಗ್ನಿ, ಕರ್ಮವೀರ, ವಾರಪತ್ರಿಕೆ, ಹೊಸತು, ಪ್ರಪಂಚ ಪತ್ರಿಕೆಗಳಲ್ಲಿ ಪ್ರಕಟಗೊಂಡ ಸಂದರ್ಶನಗಳು ಇಲ್ಲಿ ಸಂಗ್ರಹಗೊಂಡಿವೆ. ಪಾಪು, ಕಣವಿ, ಎನ್ಕೆ, ಚಂಪಾ, ಕಾಪಸೆ, ಮಾಲತಿ ಪಟ್ಟಣಶೆಟ್ಟಿ, ಹಕಾರಿ, ಮೊಗಸಾಲೆ, ಅಶೋಕ ಶೆಟ್ಟರ, ಢುಂಡಿರಾಜ್, ಸ.ಉಷಾ ಮೊದಲಾದವರ ವಿಶಿಷ್ಟ ಸಂದರ್ಶನಗಳು ಇಲ್ಲಿವೆ. ಇವರ ವ್ಯಕ್ತಿತ್ವ, ನಡೆಯನ್ನು ಅರಿತುಕೊಳ್ಳಲು ಇವು ಸಹಕಾರಿಯಾಗುತ್ತವೆ.
©2025 Book Brahma Private Limited.