ಕುಮಾರರಾಮ ಹಾಗು ಕೃಷ್ಣಗೊಲ್ಲರ ಮಹಾಕಾವ್ಯ ಎಂಬ ಎರಡೂ ಕುಂದನು ಮಹಾಕಾವ್ಯಗಳು ಬುಡಕಟ್ಟು ಸಮುದಾಯಕ್ಕೆ ಸಂಬಂಧಿಸಿದ ಬೃಹತ್ ಕಥಾನಕಗಳು. ಕೃಷ್ಣಗೊಲ್ಲರ ಮಹಾಕಾವ್ಯ ಕೃಷ್ಣಗೊಲ್ಲ ಸಮುದಾಯಕ್ಕೆ ಮಹಾಕಾವ್ಯವಾದರೆ, ಕುಮಾರರಾಮನ ಕಾವ್ಯ ಬೇಡವಾಲ್ಮೀಕಿ, ನಾಯಕ, ಗಂಗಾಮತಸ್ಥ ಸಮುದಾಯಗಳಿಗೆ ಪೂಜ್ಯನೀಯವಾದ ಕೃತಿ. ಕುಮಾರರಾಮ ಮಹಾಕಾವ್ಯದಲ್ಲಿ ಕಥಾನಾಯಕ ಕುಮಾರರಾಮನ ಬಗ್ಗೆ ಐತಿಹಾಸಿಕ ವಿವರಣೆಯಿದೆ. ಕೃಷ್ಣಗೊಲ್ಲರ ಕಾವ್ಯದಲ್ಲಿ ಶರಬಂಧರಾಜ ಸಾಂಸ್ಕೃತಿಕ ಕಥಾನಾಯಕ ನಾದ ಬಗ್ಗೆ ವಿವರಗಳಿವೆ. ಈ ಎರಡೂ ಮಹಾಕಾವ್ಯಗಳ ಮೌಖಿಕ ಪರಂಪರೆಯ ಸುಪಾದನಾ ಗ್ರಂಥವಿದು. ಬಳ್ಳಾರಿ ಜಿಲ್ಲೆಯ ಬುಡ್ಗ ಜಂಗಮ ಸಮುದಾಯದ ದರೋಜಿ ಈರಮ್ಮ ಮತ್ತು ಆಕೆಯ ಸಂಗಡಿಗರಿಂದ ಹಾಡಿಸಿ ಈ ಕಾವ್ಯಗಳನ್ನು ಸಂಪಾದಿಸಲಾಗಿದೆ.
©2024 Book Brahma Private Limited.