ಚನ್ನಪ್ಪ ಕಟ್ಟಿ ಅವರ ಕೃತಿ ಅಮೋಘಸಿದ್ಧ ಜನಪದ ಮಹಾಕಾವ್ಯ. ಅವರು ಕರಿತೆಲಿ ಮಾನವರಲ್ಲಿ ಗುರುಪರಂಪರೆ ಬೆಳೆಸಿದ ಮಾಂತ್ರಿಕ ಕಾವ್ಯ 'ಅಮೋಘಸಿದ್ಧ ಜನಪದ ಮಹಾಕಾವ್ಯ' ಹಿರಿಯ ಕಥೆಗಾರರಾದ ಡಾ. ಚೆನ್ನಪ್ಪ ಕಟ್ಟಿ ಅವರು ಸಂಪಾದಿಸಿರುವ ಅಮೋಘಸಿದ್ಧ ಜನಪದ ಕಾವ್ಯವನ್ನು ಹಾಡಿದವರು ಅವಧು ಬನಸಿದ್ಧ ಹಿರಕೂರ. ಮಹಾರಾಷ್ಟ್ರದ ಹತ್ತೂರಿನ ಇವರು ಮೌಖಿಕವಾಗಿ ಕಾಪಿಟ್ಟುಕೊಂಡು ಬಂದಿದ್ದ ದೇಸಿ ಸಂಸ್ಕೃತಿಯ ಈ ಮಹಾಕಾವ್ಯದ ಲಿಖಿತ ರೂಪದ ದಾಖಲೆ ನಮ್ಮ ನಾಡು ನುಡಿಯ ಸಿರಿ ಪರಂಪರೆಗಳನ್ನು ಮುಂದಿನ ಪೀಳಿಗೆಗೆ ಹಲವು ವಿವಿದೋದ್ದೇಶಗಳಿಗಾಗಿ ಬಳಸಲು ದೊರಕುವ ಮಹತ್ವಪೂರ್ಣ ಸರಕುಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಈ ಕೃತಿಯ ಸಂಪಾದನೆ ಶ್ಲಾಘನೀಯ. 1970 ರ ದಶಕದಲ್ಲಿ ಜನಪದ ಮಹಾಕಾವ್ಯಗಳ ಸಂಪಾದನೆ ಕಾರ್ಯ ಆರಂಭವಾಗಿ ಅವುಗಳ ಅಧ್ಯಯನಕ್ಕೆ ವ್ಯವಸ್ಥಿತ ವೇದಿಕೆಯನ್ನು ನಿರ್ಮಿಸಿಕೊಟ್ಟಿದ್ದು ಪ್ರೊ. ಜೀ. ಶಂ. ಪರಮಶಿವಯ್ಯನವರು. ಅವರ 'ದಕ್ಷಿಣ ಕರ್ನಾಟಕ ಜನಪದ ಕಾವ್ಯ ಪ್ರಕಾರಗಳು' ಸಂಶೋಧನ ಗ್ರಂಥದಲ್ಲಿ ಸಂಪಾದನೆಗೆ ತೊಡಗುವ ವಿದ್ವಾಂಸರಿಗೆ ಪ್ರೇರಕ ಅಂಶಗಳಿವೆ. ಶಿಷ್ಟ ಕಾವ್ಯದಲ್ಲಿರುವಂತೆ ಜನಪದದಲ್ಲೂ ಮಹಾಕಾವ್ಯಗಳಿವೆ. ಅವುಗಳ ಪ್ರತಿಪಾದನೆಯ ವಸ್ತುವಿನ ಆಧಾರದ ಮೇಲೆ ಮಾಂತ್ರಿಕ, ವೀರ, ರೊಮ್ಯಾಂಟಿಕ್ ಮತ್ತು ಚಾರಿತ್ರಿಕ ಮಹಾಕಾವ್ಯ ಹೀಗೆ ನಾಲ್ಕು ಪ್ರಕಾರಗಳನ್ನು ನೋಡಬಹುದು.
©2024 Book Brahma Private Limited.