ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು. ಲಿಂಗ , ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳು ನಿರಾಕರಿಸಿದರು. ಕಾಯಕದ ಮೂಲಕ ಸಮ ಸಮಾಜವನ್ನು ಕಟ್ಟಲು ಅವಿರತ ಶ್ರಮಿಸಿದ ಬಸವಣ್ಣ ಮತ್ತು ಆತನ ಸಮಕಾಲೀನ ಶರಣರ ಜೀವನ ಕಥಾನಕವನ್ನು ಇಲ್ಲಿರುವ ಕಾವ್ಯಗಳು ಕಟ್ಟಿಕೊಡುತ್ತದೆ. ಹನ್ನೆರಡನೇ ಶತಮಾನದ ಜೀವನಕ್ರಮವನ್ನು ಬೋಧಿಸುವ ಚರಿತ್ರೆಯಾಗಿ ಉಳಿಯದೆ ವಾಸ್ತವಿಕ ನೆಲೆಗಟ್ಟಿನಲ್ಲಿ ಸಮಾನತೆಯ ಸಮಾಜ ನಿರ್ಮಾಣದ ತಾತ್ವಿಕ ಕಿವಿಮಾತುಗಳನ್ನು ವಿವರಿಸುತ್ತದೆ. ಹಾಗಾಗಿ ಈ ಕೃತಿಯಲ್ಲಿ ಮೂಡಿಬರುವ ಕಾವ್ಯಗಳು ಕಥೆಯ ರೂಪ ಇದ್ದರೂ ಅದು ಮುಖ್ಯವಾಗದೆ ತತ್ತ್ವಾದರ್ಶಗಳ ಚರ್ಚೆ ಮುನ್ನೆಲೆಗೆ ಬರುವಂತೆ ಲೇಖಕ .ಪಿ.ಕೆ.ರಾಜಶೇಖರ್ ರವರು ಮಾಡಿದ್ದಾರೆ.
©2024 Book Brahma Private Limited.