`ಗಾಮೊಕ್ಕಲ ಮಹಾಭಾರತ ' ಈ ಕತಾ ವಸ್ತು ವ್ಯಾಸಮಹಾಭಾರತ ಕಥಾ ವಸ್ತುವಿನಿಂದ ಬಹು ಅಂಶಗಳಲ್ಲಿ ಭಿನ್ನವಾಗಿದ್ದು, ಇಲ್ಲಿಯ ಪಾತ್ರಗಳ ಗುಣ ಸ್ವಭಾವಗಳೂ ಸಹ ಸಾಕಷ್ಟು ಭಿನ್ನವಾಗಿವೆ. ವ್ಯಾಸ ಭಾರತದಲ್ಲಿಲ್ಲದ ಹಲವಾರು ಜಾನಪದ ರೂಢಿ ನಂಬಿಕೆ, ಸಂಪ್ರದಾಯಗಳು, ಜೀವನ ಮೌಲ್ಯಗಳು ಇವುಗಳ ಜೊತೆಗೆ ಕೆಲವು ಮೌಢ್ಯಗಳೂ ಬೆರೆತುಕೊಂಡು ಈ ಮಹಾಭಾರತ ಕತೆ ಭಿನ್ನ ಜಾಡು ಹಿಡಿಯುತ್ತದೆ. ಇಲ್ಲಿಯ ಮಾರ್ಪಾಡುಗಳೆಲ್ಲವೂ ಸುಂದರವಾದ, ಸಮಯೋಚಿತವಾದ ಮಾರ್ಪಾಡಾಗಿ ತೋರದಿದ್ದರೂ ಇಲ್ಲಿ ಗಾಮೊಕ್ಕಲ ಮಣ್ಣವಾಸನೆ, ತುಂಬಿದ, ಇನ್ನೊಂದು ಜಾನಪದ ಮಹಾಭಾರತ ಲೋಕದರ್ಶನವನ್ನು ನಾವು ಕಾಣಬಹುದಾಗಿದೆ. ಡಾ. ಎನ್.ಆರ್. ನಾಯಕ ಅವರು ಈ ಕೃತಿಯ ಸಂಪಾದಕರು.
©2024 Book Brahma Private Limited.