ಹಿರಿಹೊಳೆ ಎಂದೇ ಜನಪದರಲ್ಲಿ ರೂಢಿಗತವಾಗಿರುವ ಕೃಷ್ಣಾ ನದಿ ತೀರ ಪ್ರದೇಶದ ಜನರ ನಾಲಗೆ ಮೇಲೆ ನಲಿದಾಡುತ್ತಿದ್ದ ಒಗಟುಗಳನ್ನು ಕೇಳಿ, ಸಂಗ್ರಹಿಸಿ ಸಂಪಾದಿಸುವುದು ಈ ಜನಪದ ಸಾಹಿತ್ಯದಲ್ಲಿ ಮಹತ್ವದ್ದಾಗಿದೆ. ಕೃಷ್ಣಾ ತೀರದ ಪ್ರದೇಶಗಳಲ್ಲಿ ಜಾನಪದ ಸಿರಿ ಸೊಬಗು ತುಂಬಿ ತುಳುಕುತ್ತಿದೆ, ಬೀಸುಕಲ್ಲಿನ ಮುಂದೆ ಕುಳಿತು ಹಾಡು ಹೇಳುತ್ತಾ ಬೆಳಗು ಮುಂಜಾನೆ ಅರ್ಧ ಚೀಲ ಜೋಳ ಬೀಸಿದರೂ 'ಕಾಳ ಮುಗಿದವ ನಮ್ಮ ಹಾಡ ಮುಗಿಯಲಿಲ್ಲ' ಎಂಬಂತೆ ನಾವೆಷ್ಟೇ ಸಂಗ್ರಹಿಸಿದರೂ ಇನ್ನೂ ಉಳಿದುಕೊಂಡೇ ಇರುವ ಜಾನಪದ ಸಂಪತ್ತು ಇಲ್ಲಿದೆ.ಈ ಸಂಪತ್ತಿನ ಭಾಗವಾಗಿ ಈ ನದಿ ತೀರದ ಹಳ್ಳಿಗಳಲ್ಲಿ ಹತ್ತಾರು ವರ್ಷಗಳಿಂದ ಸುತ್ತಾಡಿ ತಂದ ಒಗಟುಗಳೇ ಈ 'ಕೃಷ್ಣಾ ತೀರದ ಜನಪದ ಒಗಟುಗಳು'. ಎಂದು ಲೇಖಕರು ಹೇಳಿಕೊಂಡಿದ್ದಾರೆ.
©2025 Book Brahma Private Limited.