ಒಗಟಿನಾಗರ

Author : ಹೀ.ಚಿ. ಶಾಂತವೀರಯ್ಯ

Pages 91

₹ 36.00




Year of Publication: 2015
Published by: ವಾಸನ್ಸ್ ಪಬ್ಲಿಕೇಷನ್ಸ್
Address: 25, ವಾಸನ್ಸ್ ಟವರ್, ಗುಡ್ ಶೆಡ್ ರೋಡ್, ಟಿಸಿಎಂ ರಾಯನ್ ರೋಡ್, ಸುಭಾಶ ನಗರ, ಕಾಟನ್ ಪೇಟೆ, ಬೆಂಗಳೂರು-560053
Phone: 080 4853 5855

Synopsys

ಹಿರಿಯ ಸಾಹಿತಿ ಹೀ.ಚಿ. ಶಾಂತವೀರಯ್ಯ, ಎಚ್.ಎಸ್. ಮುಕ್ತಿಶ್ರೀ ಹಾಗೂ ಎಚ್.ಎಸ್. ಶ್ರೀದೇವಿ ಸಂಯುಕ್ತವಾಗಿ ಸಂಪಾದಿಸಿದ ಕೃತಿ-ಒಗಟಿನಾಗರ. ಒಗಟುಗಳು, ಜಾನಪದ ಸಾಹಿತ್ಯದ ಒಂದು ಮಹತ್ವದ ಪ್ರಕಾರ. ಜಾನಪದೀಯ ಬೌದ್ಧಿಕ ಕಸರತ್ತುಗಳಿಗೆ ಪೂರಕವಾಗಿ ಒಗಟುಗಳಿರುತ್ತವೆ. ಅಂತಹ ಒಗಟುಗಳ ಆಗರವೇ ಈ ಕೃತಿ. ಒಗಟುಗಳಲ್ಲಿ ಮೇಲಾರ್ಥ ಬೇರೆ ಗೂಢಾರ್ಥ ಬೇರೆ. ಸಂಕೇತಾರ್ಥಗಳಲ್ಲಿಯ ಈ ಒಗಟುಗಳ ಮೇಲಾರ್ಥದ ಸುಳಿವು ಪಡೆದು ಗೂಢಾರ್ಥವನ್ನು ಕಂಡುಕೊಳ್ಳುವುದು ಒಗಟುಗಳ ಕುತೂಹಲದ ಪ್ರಶ್ನೆಯೂ, ಅದರ ಒಡಲಲ್ಲೇ ಉತ್ತರವೂ ಇಟ್ಟುಕೊಂಡಿರುವ ವಿಚಿತ್ರ ಬೌದ್ಧಿಕ ಕಸರತ್ತಿಗೆ ಪ್ರೇರಣೆ ನೀಡುತ್ತವೆ. ಇಂತಹ ನೂರಾರು ಒಗಟುಗಳನ್ನು ಸಂಗ್ರಹಿಸಿ ಸಂಪಾದಿಸಿದ್ದೇ ಈ ಕೃತಿ.

About the Author

ಹೀ.ಚಿ. ಶಾಂತವೀರಯ್ಯ
(11 June 1934 - 27 September 2020)

ಲೇಖಕ ಶಾಂತವೀರಯ್ಯನವರು ಹುಟ್ಟಿದ್ದು ತಿಪಟೂರು ತಾಲ್ಲೂಕಿನ ಹೀಚನೂರಿನ ದೇವರ ಹಟ್ಟಿ ಪ್ರಸಿದ್ಧ ಮನೆತನದಲ್ಲಿ. ತಂದೆ-ಚಿಕ್ಕಯ್ಯ, ತಾಯ- ಚಿಕ್ಕಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಹೀಚನೂರು, ತಿಪಟೂರಿನಲ್ಲಿ ಪೂರ್ಣಗೊಳಿಸಿದ ಅವರು ಕಾಲೇಜು ವಿದ್ಯಾಭ್ಯಾಸವನ್ನು ದಾವಣಗೆರೆ, ಮೈಸೂರು ಮತ್ತು ಬೆಂಗಳೂರಿನಲ್ಲಿ ಬಿ.ಎ. (ಆನರ್ಸ್) ಎಂ.ಎ. ಮತ್ತು ಬಿ.ಇಡಿ ಪದವಿಗಳನ್ನು ಪಡೆದರು. ಪದವಿಯ ನಂತರ ಉದ್ಯೋಗ ಪ್ರಾರಂಭಿಸಿದ್ದು ತಿಪಟೂರು, ಚಿಕ್ಕನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ. ನಂತರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು ಸಹಾಯಕ ಸಂಪಾದಕರಾಗಿ, ಉಪಸಂಪಾದಕರಾಗಿ, ಸಂಪಾದಕರಾಗಿ ಸೇವೆಸಲ್ಲಿಸಿ ನಿವೃತ್ತಿ ಪಡೆದರು. ಕನ್ನಡದ ಪ್ರಸಿದ್ಧ ಪತ್ರಿಕೆಗಳಲ್ಲಿ ಅವರ ಹಲವಾರು ಲೇಖನಗಳು ನಗೆಬರಹಗಳು ...

READ MORE

Related Books