ಕನ್ನಡ ಸಾವಿರದ ಒಗಟುಗಳು

Author : ಸೋಮಶೇಖರ ಇಮ್ರಾಪುರ

Pages 264

₹ 175.00




Year of Publication: 2017
Published by: ಅರವಿಂದ್ ಇಂಡಿಯಾ
Address: # 43, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬಿಎಚ್ ಸಿಎಸ್ ಬಡಾವಣೆ, ಬಿಎಂಟಿಸಿ ಬಸ್ ನಿಲ್ದಾಣ ಬಳಿ, ಚಂದ್ರಾ ಬಡಾವಣೆ, ಬೆಂಗಳೂರು-560040

Synopsys

ಲೇಖಕ ಹಾಗೂ ಜಾನಪದ ತಜ್ಞ ಡಾ. ಸೋಮಶೇಖರ ಇಮ್ರಾಪುರ ಅವರು ಸಂಗ್ರಹಿಸಿದ ಕೃತಿ-ಕನ್ನಡ ಸಾವಿರದ ಒಗಟುಗಳು. ಗಾದೆ, ಒಗಟು, ಒಡವು ಈ ರೀತಿಯ ಜಾಪದೀಯ ಸಾಹಿತ್ಯವು ಅಕ್ಷರರ್ಶ ಸಾವಿರದವು. ಶತಮಾನ ಕಳೆದರೂ ಜನಾಂಗಕ್ಕೆ ಇವು  ಬೆಳಕು ತೋರುತ್ತವೆ. ಮಾನವ ಸ್ವಭಾವಗಳನ್ನು ತಿಳಿ ಹೇಳುತ್ತವೆ. ಇಂತಹ ಒಗಟುಗಳನ್ನು ಲೇಖಕರು ಸಂಗ್ರಹಿಸಿ ನೀಡಿದ್ದು, ಈ ಕೃತಿಯ ಹೆಗ್ಗಳಿಕೆ.

About the Author

ಸೋಮಶೇಖರ ಇಮ್ರಾಪುರ
(14 February 1940)

ಜನಪದ ತಜ್ಞ, ಕವಿ ಸೋಮಶೇಖರ ಇಮ್ರಾಪುರ ಅವರು 1940 ಫೆಬ್ರುವರಿ 14 ರಂದು ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಅಬ್ಬಿಗೇರಿಯಲ್ಲಿ ಜನಿಸಿದರು. ತಾಯಿ ಸಂಗವ್ವ, ತಂದೆ ಗುರಪ್ಪ. ಅಬ್ಬಿಗೇರಿಯಲ್ಲಿ ಪ್ರಾಥಮಿಕ -ಪ್ರೌಢಶಿಕ್ಷಣ ಪಡೆದ ನಂತರ ಅವರು ಧಾರವಾಡದಲ್ಲಿ ಶಿಕ್ಷಣ ಮುಂದುವರಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಹಾಗೂ ಭಾಷಾ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ನಂತರ ಧಾರವಾಡದ ಜೆ.ಎಸ್.ಎಸ್. ಕಾಲೇಜಿನಲ್ಲಿ ಅಧ್ಯಾಪಕರಾಗಿ, ತದನಂತರ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿ ಪಡೆದರು. ಗ್ರಂಥ ಸಂಪಾದನೆ, ಕಥೆ, ಕವನ, ವಿಮರ್ಶೆ ಇವರ ಆಸಕ್ತಿ ವಲಯವಾಗಿತ್ತು. ಕೆಲಕಾಲ ದಲಿತ ದ್ವೈ ಮಾಸಿಕ ಪತ್ರಿಕೆ ಸಂಪಾದಕರಾಗಿದ್ದರು. .  ...

READ MORE

Related Books