ಜಾನಪದ ತಜ್ಞ ಡಾ. ಕಾಳೇಗೌಡ ನಾಗವಾರ ಅವರು ಗಾದೆಗಳನ್ನು ಸಂಗ್ರಹಿಸಿ, ಸಂಪಾದಿಸಿದ ಕೃತಿ-ಬೀದಿ ಮಕ್ಕಳು ಬೆಳದೊ. ಜಾನಪದ ಸಾಹಿತ್ಯ ರಚನೆಕಾರರು ಯಾರೆಂಬುದು ಗೊತ್ತಿಲ್ಲ. ಬಾಯಿಂದ ಬಾಯಿಗೆ ಹರಿದು ಬಂದ ಸಾಹಿತ್ಯವದು. ಗಾದೆ ಮಾತುಗಳೆಂದರೆ ವೇದಕ್ಕೂ ಮಿಗಿಲು ಎಂಬ ಭಾವನೆ ಜನಮಾನಸದಲ್ಲಿದೆ. ಏಕೆಂದರೆ, ಗಾದೆಗಳು ಬದುಕಿನ ಅನುಭವದ ಬೆಳಕು. ಸಾರ ಎಲ್ಲವೂ ಆಗಿದೆ. ಒಂದು ವೇಳೆ ವೇದ ಸುಳ್ಳಾಗಬಹುದು. ಆದರೆ, ಗಾದೆಗಳು ಸುಳ್ಳಾಗಲಾರವು. ಅವು ಬದುಕಿನ ಸತ್ಯದ ಮೂಲವನ್ನು ಒಳಗೊಂಡಿವೆ. ಹೀಗಾಗಿ, ಬದುಕಿನ ವಿವಿಧ ಆಯಾಮಗಳ ಅಧ್ಯಯನಕ್ಕೂ ಈ ಗಾದೆಗಳು ಎಲ್ಲ ರೀತಿಯ ಆಕರಗಳನ್ನು ಪೂರೈಸುತ್ತವೆ. ಒಳನೋಟಗಳನ್ನು ನೀಡುತ್ತವೆ. ಬದುಕಿನ ರೀತಿಯನ್ನು ಕಲಿಸುತ್ತವೆ. ಈ ಹಿನ್ನೆಲೆಯಲ್ಲಿ ಈ ಕೃತಿಯು ಮಹತ್ವ ಪಡೆಯುತ್ತದೆ.
©2025 Book Brahma Private Limited.