ಡಾ. ವಾಸುದೇವ ಬಡಿಗೇರ ಅವರ ಸಂಶೋಧನಾತ್ಮಕ ಕೃತಿ ‘ಬಳ್ಳಾರಿ ಪರಿಸರದ ಸಾಂಸ್ಕೃತಿಕ ಪರಂಪರೆ’. ಸಮಗ್ರ ಇತಿಹಾಸದಲ್ಲಿ ಪ್ರಾದೇಶಿಕ ಮತ್ತು ಸ್ಥಳೀಯ ವಿಷಯಗಳು ಗುರುತಿಸಿಕೊಳ್ಳುವುದು ತೀರ ಕಡಿಮೆ. ಸ್ಥಳೀಯ ಘಟನಾವಳಿಗಳು. ಆಲೋಚನೆಗಳು ಹಾಗೂ ಸಾಂಸ್ಕೃತಿಕ ಸಂಬಂಧಗಳನ್ನು ಸಂಶೋಧನೆ, ಅಧ್ಯಯನಗಳ ಮೂಲಕ ಸಮಗ್ರವಾಗಿ ನಿರೂಪಿಸುವವರೆಗೆ ರಾಷ್ಟ್ರದ ಇತಿಹಾಸ ಪರಿಪೂರ್ಣವಾಗುವುದಿಲ್ಲ. ಆದ್ದರಿಂದ ನಿರ್ಲಕ್ಷಿತ ಪ್ರದೇಶದ ಮತ್ತು ಸ್ಥಳೀಯ ಇತಿಹಾಸದ ಕಡೆಗೆ ಹೆಚ್ಚು ಗಮನಹರಿಸಬೇಕು. ನಾಡಿನ ಇತರೆ ಪ್ರದೇಶಗಳಿಗೆ ಹೋಲಿಸಿದರೆ ಗ್ರಾನೈಟ್ ಶಿಲೆ ಮತ್ತು ಕಬ್ಬಿಣ ಅದಿರನ್ನೊಳಗೊಂಡ ಬೆಟ್ಟಗಳು, ತುಂಗಭದ್ರಾ ನದಿ ನೀರು, ಕಾಡು ಮೊದಲಾದವುಗಳಿಂದ ಕೂಡಿದ ಇಲ್ಲಿಯ ನಿಸರ್ಗ ಸಂಪತ್ತು ಜನ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿತು. ಇದರಿಂದ ಬಹು ಪ್ರಾಚೀನ ಕಾಲದಲ್ಲಿಯೇ ಪಂಪಾ, ಕಿಷ್ಕಿಂಧ, ಕಾರ್ತಿಕೇಯ ಮತ್ತು ಮೈಲಾರ ಕ್ಷೇತ್ರಗಳು ಅನೇಕ ನಂಬಿಕೆ ಸಂಪ್ರದಾಯಗಳನ್ನು ಮೈಗೂಡಿಸಿಕೊಂಡು ಬೆಳವಣಿಗೆ ಹೊಂದಿದವು. ಇವುಗಳೊಂದಿಗೆ ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ, ದೇವಾಲಯ ಮತ್ತು ಮೂರ್ತಿಶಿಲ್ಪ ಕಲೆ ಸಾಂಸ್ಕೃತಿಕ ಮಹತ್ವವನ್ನು ಪಡೆದಿವೆ. ಈ ವಲಯಗಳನ್ನು ಸಮಗ್ರವಾಗಿ ವಿಶ್ಲೇಷಣೆಗೆ ಒಳಪಡಿಸಿ ಮಹತ್ವದ ಗ್ರಂಥವನ್ನು ರಚಿಸಿದ್ದಾರೆ.
©2025 Book Brahma Private Limited.