About the Author

ಯುವ ಬರಹಗಾರ ಶ್ರೀನಿವಾಸ ಎ. ಜಿ. ಅವರು 1983 ಫೆಬ್ರುವರಿ 02ರಂದು ತುಮಕೂರಿನ ಗುಬ್ಬಿಯಲ್ಲಿ ಜನಿಸಿದರು. ತಂದೆ - ಗೋವಿಂದಯ್ಯ, ತಾಯಿ - ಜಯಮ್ಮ. ಆರಂಭಿಕ ವಿದ್ಯಾಭ್ಯಾಸವನ್ನು ಹುಟ್ಟೂರಿನಲ್ಲಿಯೇ ಪೂರೈಸಿ, ಪ್ರೌಢಶಿಕ್ಷಣವನ್ನು ಸಮೀಪದ ಹೊಸಹಟ್ಟಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಂತರ ತುಮಕೂರು ವಿಶ್ವವಿದ್ಯಾನಿಲಯದ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 

ಕನ್ನಡ ವಿಶ್ವವಿದ್ಯಾನಿಲಯ ಹಂಪಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದಲ್ಲಿ ‘ನಿಟ್ಟೂರು ಹೋಬಳಿ ಸಾಂಸ್ಕೃತಿಕ ಅಧ್ಯಯನ’ ಎಂಬ ಶೀರ್ಷಿಕೆಯಡಿ ಎಂ.ಫಿಲ್‌ ಪದವೀಧರರು.  ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಸಿ. ಎಸ್. ವಾಸುದೇವನ್‌ ಅವರ ಮಾರ್ಗದರ್ಶನದಲ್ಲಿ ಉತ್ಖನನ ವರದಿಗಾರರಾಗಿ “Report On The Excavations at Hampi” ಎರಡು ಸಂಪುಟಗಳು ಪ್ರಕಟಗೊಂಡಿವೆ.

ಪ್ರಸ್ತುತ ಗುಬ್ಬಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿಗೆ ಸಂಬಂಧಿಸಿದ ಸಂಶೋಧನಾ ಲೇಖನಗಳನ್ನು ಒಳಗೊಂಡ ಇವರ ‘ಇತಿಹಾಸ ಮತ್ತು ಪುರಾತತ್ವ’ ಕೃತಿಯು ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಯುವ ಬರಹಗಾರರಿಗೆ ಕೊಡಮಾಡುವ ಪ್ರೋತ್ಸಾಹ ಧನಕ್ಕೆ ಆಯ್ಕೆಯಾಗಿದೆ.

ಶ್ರೀನಿವಾಸ ಎ. ಜಿ.