ಲೇಖಕ ಪ್ರಕಾಶ್. ಕೆ ನಾಡಿಗ್ ಅವರು ರಚಿಸಿರುವ ’ಆಡು ಆಟ ಆಡು’ ಪುಸ್ತಕವು ಮರೆಯಾಗುತ್ತಿರುವ ದೇಸಿ ಆಟಗಳನ್ನು ವಿವರಿಸುವಂತದ್ದು, ಪರಿಚಯಿಸುವಂತದ್ದು. ಆಟಪಾಟಗಳಿಗೂ ಮಕ್ಕಳಿಗೂ ಬಿಡಿಸಲಾಗದ ನಂಟು. ವಯೋಮಾನಕ್ಕೆ ಅನುಗುಣವಾಗಿ, ಋತುಮಾನಕ್ಕೆ ತಕ್ಕಂತೆ ಅನೇಕ ಆಟಗಳನ್ನು , ಕಳೆದ ಬಾಲ್ಯವನ್ನು , ಮಲೆನಾಡಿನ ಒಂದಿಷ್ಟು ಪರಿಸರದ ಬಗ್ಗೆ ತಿಳಿಸುವ ಪ್ರಕಾಶ್ ನಾಡಿಗ್ ಅವರ ಬರಹಗಳು ಅಪರೂಪದ್ದು ಮತ್ತು ಅಷ್ಟೇ ವಿಶೇಷವಾದದ್ದು.
ಪ್ರಸ್ತುತ ’ಆಡು ಆಟ ಆಡು’ ಪುಸ್ತಕದಲ್ಲಿ ಗೋಲಿ, ಬುಗುರಿ, ಚಿನ್ನಿದಾಂಡು, ಮರಕೋತಿ, ಕಳ್ಳ ಪೋಲಿಸ್, ಶೇರ್ ಕಾ ಬಚ್ಛಾ, ಐಸ್ ಪೈಸ್, ಗಾಳಿಪಟ, ಲಗೋರಿ, ಮುಂತಾದ ಆಟಗಳು , ಮತ್ತು ಹುಡುಗಿಯರಿಗಾಗಿಯೇ ಇದ್ದ ಕುಂಟೋಬಿಲ್ಲೆ, ಹಗ್ಗದಾಟ, ರಿಂಗಾಟ, ಅಡುಗೆ ಆಟಗಳ ಬಗ್ಗೆ ವಿವರಿಸುತ್ತಾರೆ. ಮಳೆಗಾಲದಲ್ಲಿ ಮನೆಯಲ್ಲೇ ಕೂತು ಆಡುವ ಕೇರಂ, ಚೌಕಾಬಾರ, ಹಳಗುಳಿ ಆಟ, ಚಿನ್ನಾಮಣೆ ಆಟ, ಮುಂತಾದವುಗಳ ಬಗ್ಗೆ ಸರಳವಾಗಿ ವಿವರಿಸುವ, ಪರಿಚಯಿಸುವ ಲೇಖಕರ ಪರಿ ಅನನ್ಯವಾದುದು.
©2024 Book Brahma Private Limited.