‘ಫೋರ್ತ್ ಅಂಪೈರ್’ ಕಿಶೋರ ಸಾಹಿತಿ ಅಂತಃಕರಣ ಅವರ ಕ್ರಿಡಾಬರಹಗಳ ಸಂಕಲನ. ಈ ಕೃತಿಯನ್ನು ಓದುತ್ತಾ ಸಾಗಿದಂತೆ ಬೆರಗು ಮೂಡಿಸುತ್ತದೆ ಎನ್ನುತ್ತಾರೆ ಪತ್ರಕರ್ತ ಮೋಹನ್ ಮುನ್ನೂರು. ಕ್ರಿಕೆಟ್ ಕುರಿತ ಅಂತಃಕರಣದ ಸಮಗ್ರವಾದ ಗ್ರಹಿಕೆ, ಈ ಗ್ರಹಿಕಯ ಕನ್ನಡಿಯಲ್ಲಿ ನಮಗೆ ನುರಿತ ವಿಮರ್ಶಕ, ಆಟವನ್ನು ಪ್ರೀತಿಸುವ ಕ್ರಿಕೆಟ್ ಅಭಿಮಾನಿ, ಅಂಕಿಅಂಶ ತಜ್ಞ, ನುರಿತ ಲೇಖಕ, ಕೊನೆಗೆ ಓರ್ವ ಪ್ರಬುದ್ಧ ಆಯ್ಕೆಗಾರನ ಅಂಶಗಳು ಸ್ಪಷ್ಟವಾಗಿ ಗೋಚರಿಸುತ್ತವೆ.
ಇಲ್ಲಿಯ ಲೇಖನಗಳು ವರದಿಯ ಹೊರತಾಗಿ ಕಲಾತ್ಮಕ ಶೈಲಿಯಲ್ಲಿವೆ. ಅಂತಃಕರಣ ಅವರ ಲೇಖನಗಳಲ್ಲಿ ಆಟಗಾರರ ಬಗೆಗೆ ಆರಾಧನಾ ಭಾವವಿಲ್ಲ. ಆಯಾ ಪ್ರದರ್ಶನದ ಆಧಾರದ ಮೇಲೆ ಮಾತ್ರ ಆಟಗಾರನ ಕುರಿತು ಮೆಚ್ಚುಗೆ ಅಥವಾ ಟೀಕೆ ಇದೆ.
©2025 Book Brahma Private Limited.