‘ಗೇಮ್ಸ್ ಪಿರಿಯಡ್’ ಕಿಶೋರ ಸಾಹಿತಿ ಅಂತಃಕರಣನ ಅಂಕಣ ಪ್ರಬಂಧಗಳ ಸಂಕಲನ. ಈ ಕೃತಿಗೆ ಹಿರಿಯ ಕ್ರೀಡಾ ಪತ್ರಕರ್ತರಾದ ರಾಜೀವ ವಡ್ಡರ್ಸೆಯವರು ಬೆನ್ನುಡಿ ಬರೆದಿದ್ದಾರೆ. ಅಂತಃಕರಣನ ಈ ಕೃತಿಯ ಬಗ್ಗೆ ಬರೆಯುತ್ತಾ..ಅಂತಃಕರಣ ಇಷ್ಟು ಚಿಕ್ಕ ವಯಸ್ಸಿನಲ್ಲಿ ಓರ್ವ ನುರಿತ ಕ್ರೀಡಾ ಲೇಖಕನಂತೆ ಸುಲಲಿತವಾಗಿ ಪುಟಗಟ್ಟಲೆ ಲೇಖನಗಳನ್ನು ಬರೆಯುತ್ತಿರುವ ಅಂತಃಕರಣ ಆಧುನಿಕ ಅಭಿಮನ್ಯ ಅನ್ನಲೇಬೇಕು ಎನ್ನುತ್ತಾರೆ.
ಒಬ್ಬೊಬ್ಬ ಲೇಖಕ ಒಂದೊಂದು ರೀತಿಯಲ್ಲಿ ಬರೆಯುವ ಕಲೆಯನ್ನು ಕರಗತ ಮಾಡಿಕೊಂಡಿರುತ್ತಾನೆ. ಏನೇ ಆದರೂ, ಲೇಖಕನಾದವನು ಓದುಗನಿಗೆ ಆರಂಭದಿಂದ ಕೊನೆಯ ತನಕ ಬೋರು ಹೊಡೆಸಬಾರದಷ್ಟೇ, ಏನು ಹೇಳಬೇಕೋ ಅದನ್ನು ಆರಂಭದ ಎರಡೋ ಮೂರೋ ಪ್ಯಾರಾಗಳಲ್ಲಿ ಚುಟುಕಾಗಿ ಬರೆದುಬಿಡಬೇಕು. ಆ ಬಳಿಕ ರಸವತ್ತಾಗಿ ವಿವರಿಸುತ್ತಾ ಹೋಗಬೇಕು. ಪ್ರಸಕ್ತ ವಿದ್ಯಮಾನಗಳ ಜೊತೆ ಇತಿಹಾಸದ ಕೆಲವೊಂದು ತುಣುಕುಗಳನ್ನು ಸೇರಿಸಿದರೆ ಲೇಖನಗಳಿಗೆ ಮತ್ತಷ್ಟು ತೂಕ ಹೆಚ್ಚುತ್ತದೆ ಎಂದು ಹೇಳುವ ಅವರು ಅಂತಃಕರಣನಿಗೆ ಉಜ್ವಲ ಭವಿಷ್ಯವಿದೆ ಎನ್ನುವ ಭರವಸೆಯ ಮಾತುಗಳನ್ನು ಹೇಳುತ್ತಾರೆ. ಹಾಗೇ ಈ ಕೃತಿಯಲ್ಲಿಅಂತಃಕರಣ ಕ್ರೀಡಾ ಅಂಕಣಕಾರನ ಎಲ್ಲಾ ಅಂಶಗಳನ್ನು ಅನುಸರಿಸಿದ್ದಾನೆ. ಹೀಗಾಗಿ ಲೇಖನಗಳು ಕ್ರೀಡಾಸಕ್ತರನ್ನು ಹಿಡಿದಿಡುತ್ತವೆ.
©2024 Book Brahma Private Limited.