'ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ' ಲೇಖಕ ನಾಗ ಎಚ್.ಹುಬ್ಳಿ ಅವರು ಭಾರತೀಯ ಹಾಕಿ ಸುವರ್ಣ ಯುಗದ ದಂತಕಥೆ ಮೇಜರ್ ಧ್ಯಾನಚಂದ್ ಅವರ ಕುರಿತು ರಚಿಸಿದ ಕೃತಿ. ಕನ್ನಡದಲ್ಲಿ ಕ್ರೀಡಾ ಪುಸ್ತಕಗಳು ಬಹಳ ಕಡಿಮೆ. ಅದರಲ್ಲೂ ಹಾಕಿ ಆಟದ ಬಗ್ಗೆ ವಿಶೇಷ ಪುಸ್ತಕಗಳು ಇಲ್ಲವೇ ಇಲ್ಲ. ಎನ್ನಬಹುದು. ಆ ಕೊರತೆಯನ್ನು ನೀಗಿಸುವ ಉತ್ತಮ ಪ್ರಯತ್ನವನ್ನು 'ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಮೂಲಕ ಡಾ. ನಾಗ ಎಚ್. ಹುಬ್ಬಿಯವರು ಮಾಡಿದ್ದಾರೆ.
ಬದುಕಿರುವಾಗಲೇ ದಂತಕಥೆಯಾದವರು ಧ್ಯಾನಚಂದ್. ಅವರ ಬಾಲ್ಯ, ಆಟ, ಒಲಿಂಪಿಕ್ಸ್ ಸಾಧನೆ, ಬದುಕಿನ ಕೊನೆಯವರೆಗಿನ ಕತೆ ಇಲ್ಲಿ ಓದುಗರ ಮನ ಮುಟ್ಟುತ್ತದೆ. ಯುವ ಆಟಗಾರರಿಗೆ ಸ್ಫೂರ್ತಿ ಮೂಡಿಸುತ್ತದೆ. ಇಲ್ಲಿನ ಬರೆವಣಿಗೆ ಸರಳವಾಗಿಯೂ, ಸ್ಪಷ್ಟವಾಗಿಯೂ ಇದೆ. ಯಾವ ಪ್ರಾಧ್ಯಾಪಕನಲ್ಲಿಯೂ ಕ್ರೀಡೆಯ ಬಗ್ಗೆ ಆಸಕ್ತಿ, ಬರೆಯುವ ಉತ್ಸಾಹವನ್ನು ನಾನು ಕಂಡಿಲ್ಲ. ನಾಗ ಎಚ್. ಹುಬ್ಬಿಯವರಿಗೆ ಅಭಿನಂದನೆಗಳು.- ಗೋಪಾಲಕೃಷ್ಣ ಹೆಗಡೆ
©2024 Book Brahma Private Limited.