‘ಜನಪದ ಕಲಾವಿದರು’ ಡಾ. ಕುರುವ ಬಸವರಾಜ್ ಅವರ ಜಾನಪದ ಲೋಕೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸುವ ಕೃತಿ. ಈ ಕೃತಿಗೆ ಪ್ರೊ.ಡಿ. ಲಿಂಗಯ್ಯ ಅವರ ಬೆನ್ನುಡಿ ಬರಹವಿದೆ. ಇದು ಕರ್ನಾಟಕ ಜಾನಪದ ಪರಿಷತ್ತು ಪ್ರಕಟಿಸುತ್ತಿರುವ ವಿಭಿನ್ನ ಕೃತಿ: ಜನಪದ ಸಾಹಿತ್ಯ ಚರಿತ್ರಿಗೆ ಸಂಬಂಧಿಸಿದ ಆಕರಕೋಶ. ಕರ್ನಾಟಕ ಜಾನಪದದ ವಿವಿಧ ಕ್ಷೇತ್ರಗಳ ಅಪೂರ್ವ ಸಾಧಕ ಕಲಾವಿದರ ಕಿರುಪರಿಚಯ ಇಲ್ಲಿದೆ. ಇಂಥವರು ನಾಡಿನಲ್ಲಿ ಲೆಕ್ಕವಿಲ್ಲದಷ್ಟು ಮಂದಿ ಇದ್ದಾರೆ. ಕೆಲವರು ಮಾತ್ರ ದಾಖಲಾಗಿದ್ದಾರೆ ಎನ್ನುತ್ತಾರೆ ಪ್ರೊ.ಡಿ. ಲಿಂಗಯ್ಯ. ಜೊತೆಗೆ, ಈ ಅನನ್ಯ ಕಲಾವಿದರು ತಮ್ಮ ನೆನಪಿನೋವರಿಯಲ್ಲಿ ಮೌಖಿಕ ಜಾನಪದವನ್ನು ರಕ್ಷಿಸಿಕೊಂಡು ಬೆಳಸಿಕೊಂಡು ನಮಗೆ ನಿರೂಪಿಸದೆ ಇದ್ದರೆ, ಪ್ರದರ್ಶಿಸಿದೆ ಇದ್ದರೆ ಇಂದು ಕನ್ನಡ ಜಾನಪದದಲ್ಲಿ ಏನೇನೂ ಕೆಲಸವಾಗುತ್ತಿರಲಿಲ್ಲ. ಇವರೆಲ್ಲ ನಮ್ಮ ಅಧ್ಯಯನ ಸಂಪನ್ಮೂಲ ವ್ಯಕ್ತಿಗಳು ಎಂದಿದ್ದಾರೆ. ಜಾನಪದ ಕನಸುಗಾರ ನಾಡೋಜ ಎಚ್.ಎಲ್. ನಾಗೇಗೌಡರ ದೂರದೃಷ್ಟಿಯ ಫಲವಾಗಿ ರೂಪುಗೊಂಡು ಜಾನಪದ ಲೋಕದ ಉತ್ಸವದ ಸಂದರ್ಭದಲ್ಲಿ ಸನ್ಮಾನಕ್ಕೆ ಪಾತ್ರರಾದ ಈ ಕಲಾವಿದರ ಸಂಕ್ಷಿಪ್ತ ಪರಿಚಯವನ್ನು ಡಾ.ಚಕ್ಕೆರೆ ಶಿವಶಂಕರ್ ಮತ್ತು ಡಾ. ಕುರುವ ಬಸವರಾಜ್ ನಿರೂಪಿಸಿದ್ದಾರೆ.
©2025 Book Brahma Private Limited.