ಪ್ರೊ. ಎಸ್.ಎಸ್. ಅಂಗಡಿ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರು. ಪ್ರಾಚೀನ ಸಾಹಿತ್ಯ, ಹಸ್ತಪ್ರತಿ ಗ್ರಂಥ ಸಂಪಾದನೆ, ಭಾಷಾಶಾಸ್ತ್ರ ಬಗೆಗೆ ಅಪಾರ ಪಾಂಡಿತ್ಯ ಹೊಂದಿರುವ ಅವರು 'ಸರಳ ಶಬ್ದಮಣಿ ದರ್ಪಣ', 'ಕನ್ನಡ ಹಸ್ತಪ್ರತಿ ಭಾಷಿಕ ವಿವೇಚನೆ', 'ಕರ್ನಾಟಕ ಗ್ರಂಥ ಸಂಪಾದನೆ', 'ಸರಳ ಕವಿರಾಜಮಾರ್ಗ' ಕೃತಿಗಳನ್ನು ಪ್ರಕಟಿಸಿದ್ದಾರೆ.
ಅವರು ಪ್ರಕಟಿಸಿದ ಸಂಶೋಧನಾ ಲೇಖನಗಳು ಹೀಗಿವೆ: ಗ್ರಂಥಸಂಪಾದನೆ : ಕೆ.ಜಿ.ಕುಂದಣಗಾರ, ಕೆ.ಜಿ.ಕುಂದಣಗಾರ ಅಧ್ಯಯನ ವಿಧಾನ, ಹರ್ಮನ್ ಮೋಗ್ಲಿಂಗ್ ಸಂಶೋಧನ ವೈಧಾನಿಕತೆ, ಗ್ರಂಥ ಸಂಪಾದನೆ: ಶಿ.ಚ.ನಂದಿಮಠ, ಗ್ರಂಥ ಸಂಪಾದನೆ: ಗೊರೆಬಾಳ್ ಹನುಮಂತರಾಯ, ಗ್ರಂಥ ಸಂಪಾದನೆ: ಎನ್.ಅನಂತರಂಗಾಚಾರ್, ಕರ್ನಾಟಕ ಕವಿಚರಿತೆ: ರಚನೆಯ ವಿನ್ಯಾಸ, ಶಿ.ಶಿ.ಬಸವನಾಳ ಲಕ್ಷಣಗ್ರಂಥಗಳ ಸಂಪಾದನೆ, ಎಂ.ಎಂ.ಕಲಬುರ್ಗಿ ಅವರ ಭಾಷಾಧ್ಯಯನ, ಎಂ.ಎಂ.ಕಲಬುರ್ಗಿ ಅವರ ಛಂದಸ್ಸಿನ ಅಧ್ಯಯನ.
ಅಂಗಡಿ ಅವರಿಗೆ ಅಥಣಿ ಲಿಂಗರಾಜ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯದ ರಾಜೋತ್ಸವ ಪ್ರಶಸ್ತಿ, ಮೈಸೂರಿನ ಶ್ರೀ ಶಿವರಾತ್ರೀಶ್ವರ ಪ್ರಶಸ್ತಿಗಳು ಸಂದಿವೆ.