ಲೇಖಕಿ ಎಸ್. ಮಲ್ಲಿಕಾ ಬದ್ರಿನಾಥ ಅವರು ಪಾಕಶಾಸ್ತ್ರ ಕುರಿತು ಹತ್ತು ಹಲವು ಕೃತಿಗಳನ್ನು ರಚಿಸಿದ್ದಾರೆ. ತಮಿಳು ಹಾಗೂ ಇಂಗ್ಲಿಷ್ ನಲ್ಲೂ ಅಡುಗೆಗೆ ಸಂಬಂಧಿಸಿ ಹತ್ತಾರು ಕೃತಿಗಳನ್ನು ರಚಿಸಿದ್ದು, ಸುಮಾರು 4 ಸಾವಿರಕ್ಕೂ ಅಧಿಕ ಅಡುಗೆ ರುಚಿಗಳನ್ನು ಪರಿಚಯಿಸಿದ್ದಾರೆ. ಇವರ ಬಹುತೇಕ ಕೃತಿಗಳು ತೆಲುಗು, ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಅನುವಾದಗೊಂಡಿವೆ.
ಮಲ್ಲಿಕಾ ಬದ್ರಿನಾಥ ಅವರು ಮೂಲತಃ ತಮಿಳುನಾಡಿನ ಸೇಲಂದವರು. ಗೃಹವಿಜ್ಞಾನ ಪದವೀಧರೆ. ಪ್ರದೀಪ ಎಂಟರ್ ಪ್ರೈಸೆಸ್ ಎಂಬ ಸ್ವಂತ ಪ್ರಕಾಶನ ಸಂಸ್ಥೆ ಸ್ಥಾಪಿಸಿದ್ದಾರೆ.
ಪ್ರಶಸ್ತಿ-ಗೌರವಗಳು: ಪಾಕಶಾಸ್ತ್ರದಲ್ಲಿ ವಿನೂತನ ದೃಷ್ಟಿಕೋನದೊಂದಿಗೆ ರಚಿಸಿದ ಕೃತಿಗಳ ಹಿನ್ನೆಲೆಯಲ್ಲಿ ಅಡುಗೆ ಮಾಡುವುದೂ ಒಂದು ಕಲೆ ಎಂಬಷ್ಟು ಪ್ರಭಾವ ಬೀರಿದ ಇವರಿಗೆ 1998ರಲ್ಲಿ ಪ್ರಿಯದರ್ಶಿನಿ ಪ್ರಶಸ್ತಿ, ವಿವಿಧ ಪ್ರತಿಷ್ಠಿತ ಸಂಸ್ಥೆಗಳಿಂದ ನಳ ಪ್ರಶಸ್ತಿ, ಆಚಾರ್ಯ ಪ್ರಶಸ್ತಿ, ಅರಸುವೈ ಅರಸಿ ಪ್ರಶಸ್ತಿ ಹೀಗೆ ಹತ್ತು ಹಲವು ಗೌರವಗಳು ಸಂದಿವೆ.