ವೃತ್ತಿಯಿಂದ ವೈದ್ಯರಾಗಿರುವ ಡಾ. ಅಶೋಕ್ ಕುಮಾರ್ ಅವರು ಮಲಯಾಳಂ ಹಾಗೂ ತಮಿಳು ಭಾಷೆಯಿಂದ ಕನ್ನಡಕ್ಕೆ ಅನುವಾದಿಸುವಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಬೆಂಗಳೂರಿನ ನಿವಾಸಿ ಆಗಿರುವ ಡಾ. ಅಶೋಕ್ ಕುಮಾರ್ ಅವರು ಶಸ್ತ್ರವೈದ್ಯರು. ಮಲಯಾಳಂ ಕವಯತ್ರಿ ಕಮಲಾದಾಸ್ ಅವರ ಕವಿತೆಗಳನ್ನು ಅವರು ಕನ್ನಡೀಕರಿಸಿದ್ದಾರೆ.