Poem

ಯಾವುದು ಕವಿತೆ

ಕ್ಲಿಷ್ಟ ಪದಗಳ ಪೋಣಿಸಿ
ಒಳಾರ್ಥಗಳ ಕಲ್ಪಿಸಿ
ವ್ಯಾಕರಣಗಳ ಹೊಂದಿಸಿ
ಬರುವ ಪ್ರತಿಕ್ರಿಯೆಗಳ ಆಲೋಚಿಸಿ
ತನ್ನೊಳಗಿನ ಅರ್ಥವನ್ನು ಕೂಡಿಸಿ
ಸಾಲುಗಳ ಎಣಿಸಿ
ಪ್ರಾಸಗಳ ಜೋಡಿಸಿ
ಭಾವನೆಗಳನ್ನು ಬೇಯಿಸಿ
ಅಂತರಾಳದ ಮೌನವನ್ನು ಬೆರೆಸಿ
ಮೂರನೆಯವರಿಗೆ ಇಷ್ಟವಾಗಲೆಂದು ಬರೆಯುವುದೇ ಕವಿತೆಯ?

ನಾಲ್ಕೇ ನಾಲ್ಕು ಪದಗಳಿಗೆ ತನ್ನದೇ ಉಡುಪು ತೊಡಿಸಿ
ಬರುವ ಅರ್ಥಗಳ ಗೋಜಿಗೆ ಹೋಗದೆ
ಗೀಚಬೇಕನ್ನಿಸಿದಾಗಲೆಲ್ಲಾ ಗೀಚಿ ಗೀಚಿ ಸಾಲುಗಳ
ತನ್ನ ಮನದ ಆಕ್ರಂದಣವ
ಹೊರ ಹಾಕಲು ಬರೆವ ಸಾಲುಗಳು
ಪ್ರಾಸ ವ್ಯಾಕರಣಗಳ ಸೋಕದ
ನಗ್ನ ವಾಕ್ಯಗಳು ಕವಿತೆಯ?

- ಶೀತಲ್

ಶೀತಲ್ ವನ್ಸ್ ರಾಜ್

ಲೇಖಕಿ ಶೀತಲ್ ವನ್ಸ್ ರಾಜ್ ಅವರು ಮೂಲತಃ ಮಲೆಯಾಳಿ. ಆದರೆ ಹುಟ್ಟಿದ್ದು, ಬೆಳೆದಿದ್ದು, ಓದಿದ್ದು ಕರ್ನಾಟಕದ ಶಿವಮೊಗ್ಗದಲ್ಲಿ. ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರೆ. ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ವೃತ್ತಿ ನಿರ್ವಹಿಸುತ್ತಿದ್ದಾರೆ. ಕನ್ನಡದಲ್ಲಿ ಇವರು ಬರೆದ ಅನೇಕ ಕವನ, ಕಥೆ, ಲೇಖನಗಳು ಅಂತರ್ಜಾಲ ತಾಣಗಳಲ್ಲಿ/ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಕೃತಿಗಳು : ಅವಳ್ಯಾರು

More About Author