Poem

ಉಧೋ ಯಲ್ಲಮ್ಮ ದೇವಿ

ನೋಡ ಬಂದೆನು ನಾ ಸವದತ್ತಿಯನು
ಉಧೋ ಎಂದು ಏರಿದೆನು ಗುಡ್ಡವನು
ಶಕ್ತಿ ದೇವತೆ ನೀ ಪವಾಡ ಮಾತೇ!
ರೇಣುಕಾ ದೇವಿ ನಿನಗೆ ನಮೋಸ್ತುತೇ.

ರಾಜಕುಮಾರಿ ನೀ ಜಮದಗ್ನಿ ಲಗ್ನವಾದೆ
ವೈಭೋಗ ತ್ಯಜಿಸಿ, ಕಷ್ಟವನು ಸಹಿಸಿದೆ
ಒಮ್ಮೆ ಪರಶುರಾಮನಿಂದ ಹತ್ಯೆಯಾದೆ
ಪತಿಯಿಂದ ಮತ್ತೆ ಜೀವ ಮುತ್ತೈದೆಯಾದೆ.

ಬನದುಣ್ಣಿಮೆ ಆರಂಭ ನಿನ್ನಾರಾಧನೆ
ಹೆಜ್ಜೆಜ್ಜೆಗೂ ಜನರಿಂದ ಭಕ್ತಿ ಭಜನೆ
ಮುಗ್ಧ ಜನರು, ಭಕ್ತರು ನಮ್ಮಮ್ಮ
ನಾಡ ಉತ್ತರಾರಾಧ್ಯ ದೇವಿ ಎಲ್ಲಮ್ಮ.

ಭಂಡಾರದ ಪವಾಡ ಮನಗಂಡ ಜನರು
ಹಣೆಗೆ, ಮೈಕೈಗೆ ಬಳಿದುಕೊಳ್ಳುವರು
ಭಕ್ತಿ ಹೆಸರಲಿ ನಾನಾ ದಂದೆಯಾಗದಿರಲಿ
ಸವದತ್ತಿ ಸುತ್ತೆಲ್ಲ ಶಿಸ್ತು ಸ್ವಚ್ಛತೆ ಇರಲಿ.

ಜಾತ್ರೆಗೆ ಬಂದ ಭಕ್ತರೇ ಸ್ವಚ್ಛತೆ ಕಾಪಾಡಿ
ಗುಡ್ಡದ ಐಸಿರಿ ದೇವಿಗೆ ಕೈ ಮುಗಿಯಿರಿ
ದೇವಿ ನಿನಗಿದೋ ಜಯಘೋಷ ಉಧೋ
ಕಾಪಾಡು ಭಕ್ತರನು ನಿನ್ನೇ ನಂಬಿಹುದು.

- ಸಂತೋಷ್ ಬಿದರಗಡ್ಡೆ

 

 

ಸಂತೋಷ್ ಬಿದರಗಡ್ಡೆ

ಸಂತೋಷ್ ಬಿದರಗಡ್ಡೆ ಪ್ರಸ್ತುತ ಐತಿಹಾಸಿಕ ತಾರಕೇಶ್ವರನ ನಾಡು, ಕುಮಾರೇಶ್ವರ ಮಹಾಸ್ವಾಮಿಗಳ ಭೂಮಿ ಹಾನಗಲ್ಲ ತಾಲೂಕಿನ ಪಂ.ಪುಟ್ಟರಾಜ ಗವಾಯಿಗಳ ಜನ್ಮಸ್ಥಳ ದೇವರ ಹೊಸಪೇಟೆಯಲ್ಲಿ  ಶಿಕ್ಷಕ ಸೇವೆಯಲ್ಲಿರುತ್ತಾರೆ.  ಪ್ರವೃತ್ತಿಯಲ್ಲಿ ಕತೆ, ಕವಿತೆ, ಲೇಖನ ಬರೆಯುವ ಯುವ ಸಾಹಿತಿಯಾಗಿದ್ದಾರೆ. ಅವರು ಬೆಣ್ಣೆನಗರಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬಿದರಗಡ್ಡೆ  ಗ್ರಾಮದಲ್ಲಿ 1987, ಮೇ 20 ರಂದು ಜನಿಸಿದರು. ತಂದೆ ಪರಮೇಶ್ವರಪ್ಪಗೌಡ್ರು   ತಾಯಿ ಬಿ ಹೆಚ್ ದಾಕ್ಷಾಯಿಣಮ್ಮ 2005ನೇ ಇಸವಿಯಲ್ಲಿ ಚಾಲುಕ್ಯರ ರಾಜಧಾನಿ ಬಾದಾಮಿ ತಾಲೂಕಿನಲ್ಲಿ ಶಿಕ್ಷಕವೃತ್ತಿ ಪ್ರಾರಂಭಿಸಿದ ಇವರು  ಹಾನಗಲ್ಲ ತಾಲೂಕಿನಲ್ಲಿ ಸೇವೆಗೈಯುತ್ತಿದ್ದಾರೆ. "ಬಿದರಗಡ್ಡೆ ಮಲ್ಲಿಕಾರ್ಜುನ" ಕಾವ್ಯನಾಮದಲ್ಲಿ ಆಧುನಿಕ ವಚನಗಳನ್ನು, ಸಾವಿರಾರು ಕವಿತೆಗಳನ್ನು ಬರೆದಿರುತ್ತಾರೆ. ಇವರ ಲೇಖನಗಳು, ಕವಿತೆಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿವೆ. 

ಕೃತಿಗಳು: ಎಳ್ಳುಬೆಲ್ಲ, ಯಶೋಗಾಥರು, ನವರಾತ್ರಿ, .ಚಂದಮಾಮ ಇತ್ಯಾದಿ. ಸಂಪಾದಿತ ಕವನ ಸಂಕಲನಗಳು: ಸೃಜನಶೀಲ ಕಾವ್ಯಸಿರಿ, ವಿವೇಕ ಕಾವ್ಯಸಿರಿ, ಅಪ್ಪ, ಪಾಪು ಒಂದು ನೆನಪು, ಕೊರೊನಾ ಜಾಗೃತ ಗೀತೆಗಳು, ಗುರು ನಮನ, ವಿವೇಕ ಕಾವ್ಯಸಿರಿ.

ಪತ್ರಿಕೆಗಳಲ್ಲಿ ಪ್ರಕಟಿತ ಲೇಖನಗಳು : ಕ್ಷಣಹೊತ್ತು ಅನುಭವಮುತ್ತು (ಲೇಖನ ಮಾಲೆ), ಸಾಧನಾ ಪಥದಲ್ಲಿ ಅಮ್ಮನ ಮಡಿಲು, ಹಾನಗಲ್ಲ ದರ್ಶನ ಇತ್ಯಾದಿ. ಭವ್ಯ ಭಾರತದ ಬೆಳಕು, ಕಾವ್ಯ ಕುಸುಮಗಳು, ಬಿಪಸಂ ಆಧುನಿಕ ವಚನಗಳು, ಬದುಕೆಂದರೆ  ಮುಂತಾದ ಕೃತಿಗಳು ಪ್ರಕಟಣೆಗೆ ಸಿದ್ಧಗೊಳ್ಳುತ್ತಿವೆ.

ಪ್ರಶಸ್ತಿಗಳು : 

"ಕರ್ನಾಟಕ ಇತಿಹಾಸ ಪ್ರಶಸ್ತಿ" 2001 "ಹಸಿರೇ ಉಸಿರು ಪರಿಸರ ಪ್ರಶಸ್ತಿ" 2002, "ಯುವ ಕವಿ" ಪ್ರಶಸ್ತಿ 2003, "ಉತ್ತಮ ನಿರೂಪಕ ಪ್ರಶಸ್ತಿ" 2004, "ಉತ್ತಮ ಮಾರ್ಗದರ್ಶಿ ಶಿಕ್ಷಕ" ಪ್ರಶಸ್ತಿ,  "ಸಾಹಿತ್ಯ ಸಿರಿ" ರಾಜ್ಯ ಪ್ರಶಸ್ತಿ 2013, ಜಿಲ್ಲಾ ಮತ್ತು ರಾಜ್ಯ ಮಟ್ಟದ "ಉತ್ತಮ ಸಂಘಟನಾ ಶಿಕ್ಷಕ ಪ್ರಶಸ್ತಿ 2013, 2014, "ಕವಿವೃಕ್ಷ ರಾಜ್ಯೋತ್ಸವ ಪ್ರಶಸ್ತಿ" 2018, "ಬೆಳಕು ಕನ್ನಡದ ಕಣ್ವ" ರಾಜ್ಯ ಪ್ರಶಸ್ತಿ 2018, "ಸಾಹಿತ್ಯ ಕಲಾ ಸಾಮ್ರಾಟ" ರಾಜ್ಯ ಪ್ರಶಸ್ತಿ, ಕರ್ನಾಟಕ ರಾಜ್ಯ "ಸೂಪರ್ ಅಚೀವರ್ಸ್ ಅವಾರ್ಡ್" 2019, “ಕವಿರತ್ನ” ರಾಜ್ಯ ಪ್ರಶಸ್ತಿ 2019, "ಸಾಹಿತ್ಯ ವಿಭೂಷಣ" ರಾಷ್ಟ್ರೀಯ ಪ್ರಶಸ್ತಿ 2019, "ಆದರ್ಶ ಶಿಕ್ಷಕ” ರಾಜ್ಯ ಪ್ರಶಸ್ತಿ 2020, "ಬಸವ ಜ್ಯೋತಿ" ರಾಜ್ಯಪ್ರಶಸ್ತಿ 2019, "ಸಾಹಿತ್ಯ ಸೇವಾರತ್ನ" ರಾಜ್ಯಪ್ರಶಸ್ತಿ 2019, “ಶ್ರೀಗುರು ರಾಘವೇಂದ್ರ ಸದ್ಭಾವನಾ ಪ್ರಶಸ್ತಿ” 2019, "ವಿದ್ಯಾ ಭೂಷಣ” ರಾಷ್ಟ್ರೀಯ ಪ್ರಶಸ್ತಿ 2020, “ಪ್ರೊ.ಆರ್.ರಾಚಪ್ಪ ಸ್ಮರಣ ಪ್ರಶಸ್ತಿ”,  "ಕನ್ನಡ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ" 2019, "ಸರ್ವೋತ್ತಮ ಸೇವಾ" ರಾಜ್ಯಪ್ರಶಸ್ತಿ 2020, "ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ" 2020, "ಸುವರ್ಣ ಗರಿ" ಪ್ರಶಸ್ತಿ, "ಶಿಕ್ಷಕ ಶ್ರೀ" ಪ್ರಶಸ್ತಿ, "ವೀರ ಮದಕರಿ ನಾಯಕ ರಾಜ್ಯ ಪ್ರಶಸ್ತಿ", "ಬಸವ ಜ್ಯೋತಿ ರಾಜ್ಯ ಪ್ರಶಸ್ತಿ", "ರಂಗಕಾವ್ಯ ಸಾಹಿತ್ಯ ಸಿರಿ" ರಾಜ್ಯ ಪ್ರಶಸ್ತಿ, ಅನಿತಾಕೌಲ್ ಸ್ಮರಣಾರ್ಥ "ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ" 2021, "ರಾಜ್ಯ ಕಲಾರತ್ನ ಪ್ರಶಸ್ತಿ", "ಕುದ್ಮಲ್ ರಂಗರಾವ್ ರಾಜ್ಯ ಪ್ರಶಸ್ತಿ 2021, "ಕಾಲಜ್ಞಾನಯೋಗಿ ನಾರೇಯಣ ಯತೀಂದ್ರ ಪ್ರಶಸ್ತಿ, " 75ನೇ ಅಮೃತ ಮಹೋತ್ಸವ "ಆಝಾದಿ ಖಿದ್ಮಾ ಗಾಯನ ಪುರಸ್ಕಾರ", "ಕನಕಶ್ರೀ" ರಾಜ್ಯ ಪ್ರಶಸ್ತಿ2021, "ವಿದ್ಯಾ ವಿಭೂಷಣ ಅಂತರಾಷ್ಟ್ರೀಯ ಪ್ರಶಸ್ತಿ, "ಸ್ಕೌಟ್ ಗೈಡ್ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕಾರ 2021"ಗುರುಕುಲ ತಿಲಕ ಪುರಸ್ಕಾರ" 2021, "ಗುರುಕುಲ ಚಾಣಕ್ಯ ಪ್ರಶಸ್ತಿ , "ಕರ್ನಾಟಕ ಕಲಾರತ್ನ" ರಾಜ್ಯ ಪ್ರಶಸ್ತಿ , "ವಿಶ್ವ ಕನ್ನಡ ರತ್ನ ರಾಜ್ಯ ಪ್ರಶಸ್ತಿ 2022 ಮೈಲಾರ ಬಸವಲಿಂಗ ಶರಣಶ್ರೀ "ಆದರ್ಶ ದಂಪತಿಗಳು" ಪ್ರಶಸ್ತಿ2022, "ರಾಷ್ಟ್ರಕವಿ ಕುವೆಂಪು ರಾಜ್ಯ ಪ್ರಶಸ್ತಿ 2022, "ಕನ್ನಡ ಭೂಷಣ ಆದರ್ಶ ದಂಪತಿ ರಾಜ್ಯ ಪ್ರಶಸ್ತಿ, "ಡಾ ಎಸ್ ರಾಧಾಕೃಷ್ಣನ್ ರಾಷ್ಟ್ರೀಯ ಶಿಕ್ಷಕ ರತ್ನ" ಪ್ರಶಸ್ತಿ, ರೋಟರಿ ಸಂಸ್ಥೆ ಹುಬ್ಬಳ್ಳಿ ವತಿಯಿಂದ "ರಾಷ್ಟ್ರ ನಿರ್ಮಾತೃ ಪ್ರಶಸ್ತಿ" ಹೀಗೆ ಅನೇಕ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಲಭಿಸಿವೆ. 

More About Author