ಸಂತೋಷ್ ಬಿದರಗಡ್ಡೆ
ಸಂತೋಷ್ ಬಿದರಗಡ್ಡೆ ಪ್ರಸ್ತುತ ಐತಿಹಾಸಿಕ ತಾರಕೇಶ್ವರನ ನಾಡು, ಕುಮಾರೇಶ್ವರ ಮಹಾಸ್ವಾಮಿಗಳ ಭೂಮಿ ಹಾನಗಲ್ಲ ತಾಲೂಕಿನ ಪಂ.ಪುಟ್ಟರಾಜ ಗವಾಯಿಗಳ ಜನ್ಮಸ್ಥಳ ದೇವರ ಹೊಸಪೇಟೆಯಲ್ಲಿ ಶಿಕ್ಷಕ ಸೇವೆಯಲ್ಲಿರುತ್ತಾರೆ. ಪ್ರವೃತ್ತಿಯಲ್ಲಿ ಕತೆ, ಕವಿತೆ, ಲೇಖನ ಬರೆಯುವ ಯುವ ಸಾಹಿತಿಯಾಗಿದ್ದಾರೆ. ಅವರು ಬೆಣ್ಣೆನಗರಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬಿದರಗಡ್ಡೆ ಗ್ರಾಮದಲ್ಲಿ 1987, ಮೇ 20 ರಂದು ಜನಿಸಿದರು. ತಂದೆ ಪರಮೇಶ್ವರಪ್ಪಗೌಡ್ರು ತಾಯಿ ಬಿ ಹೆಚ್ ದಾಕ್ಷಾಯಿಣಮ್ಮ 2005ನೇ ಇಸವಿಯಲ್ಲಿ ಚಾಲುಕ್ಯರ ರಾಜಧಾನಿ ಬಾದಾಮಿ ತಾಲೂಕಿನಲ್ಲಿ ಶಿಕ್ಷಕವೃತ್ತಿ ಪ್ರಾರಂಭಿಸಿದ ಇವರು ಹಾನಗಲ್ಲ ತಾಲೂಕಿನಲ್ಲಿ ಸೇವೆಗೈಯುತ್ತಿದ್ದಾರೆ. "ಬಿದರಗಡ್ಡೆ ಮಲ್ಲಿಕಾರ್ಜುನ" ಕಾವ್ಯನಾಮದಲ್ಲಿ ಆಧುನಿಕ ವಚನಗಳನ್ನು, ಸಾವಿರಾರು ಕವಿತೆಗಳನ್ನು ಬರೆದಿರುತ್ತಾರೆ. ಇವರ ಲೇಖನಗಳು, ಕವಿತೆಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿವೆ.
More About Author