Poem

ಟಮೋಟೋ ಸುಂದರಿ

ಓ ನನ್ನ ಕೆಂಪು ಮೊಗದ ಮುದ್ದು ಮುದ್ದಾದ ಸುಂದರಿ
ಇತ್ತೀಚೆಗೆ ನೀನಾಗುತಿರುವೆ ಏಕೆ ಮತ್ತಷ್ಟು ದುಬಾರಿ//

ನಿನ್ನಿಲ್ಲದೇ ಈರುಳ್ಳಿಯು ಆಗಿಹನು ಬ್ರಹ್ಮಚಾರಿ
ಅವನರಸಿಯಾಗಿ ಬಂದು ಬಿಡು ಬೇಗ ನೀ ರಂಗೇರಿ//

ಏ ವಯ್ಯಾರಿಯೇ ನಿನಗೇತಕೆ ಈ ತರದ ಮುನಿಸು
ಅಡುಗೆಯಲ್ಲಿ ನೀನಿಲ್ಲದೇ ನಾಲಿಗೆಗಿಲ್ಲ ಸೊಗಸು//

ಎಲ್ಲರ ಮನೆ ಮನೆಯಲ್ಲೂ ಮಹಾರಾಣಿ ನೀನು
ನಿನ್ನಯ ಬೆಲೆಯು ಗಗನಕ್ಕೇರಲು ಕಾರಣವೇನು//

ನಿನ್ನನು ದೋಚಲು ಕಾಯುತಿಹರು ಕಳ್ಳ ಖದೀಮರು
ಹಗಲು ರಾತ್ರಿ ಕಾವಲು ಕುಳಿತಿರುವ ನಿನ್ನ ಬೆಳೆದ ರೈತರು//

ನಿನ್ನ ಬೆಲೆ ತಿಳಿಯದೇ ತುಂಡರಿಸಿ ಹಾಕುತ್ತಿದ್ದೆ ಆಗ
ನಿನ್ನ ಮೊಗವನ್ನು ನೋಡುವುದು ಕಷ್ಟವಾಗಿದೆ ನನಗೀಗ //

ಬೇಗನೇ ಬಂದು ನಾರಿಯರ ಅಡುಗೆಮನೆ ನೀ ಸೇರು
ನಿನ್ನನು ಫ್ರಿಜ್ಜಲಿ ಶೇಖರಿಸಿಟ್ಟು ತಗೆದುಕೊಳ್ಳುವೆ ನಾ ಕೇರು///

- ರೇಣುಕಾ ಶಿವಕುಮಾರ

ರೇಣುಕಾ ಶಿವಕುಮಾರ

ರೇಣುಕಾ ಶಿವಕುಮಾರ ಅವರ ಆಸಕ್ತಿ ಕ್ಷೇತ್ರ ಸಾಹಿತ್ಯ. 1984 ಮಾ‘ಕಾವ್ಯ ಚಂದ್ರಿ’ ಅವರ ಚೊಚ್ಚಲ ಕವನಸಂಕಲನ. ಬರಹ, ಕಾದಂಬರಿ ಹಾಗೂ ಆಧ್ಯಾತ್ಮಿಕ ಗ್ರಂಥಗಳನ್ನು ಓದುವುದು, ಕವನ, ಹಾಗೂ ಚುಟುಕು, ಲೇಖನ, ಕಥೆ ಬರೆಯುವುದು, ಹಾಡುವುದು ಅವರ ಹವ್ಯಾಸ.

 

  

 

More About Author