Poem

ಪಸರಿಸಿದೆ ಪ್ರೇಮ ಎಲ್ಲೆಡೆ ಪರಿಮಳವಾಗಿ

ಪಸರಿಸಿದೆ ಪ್ರೇಮ ಎಲ್ಲೆಡೆ
ಪರಿಮಳವಾಗಿ

ತರುಣಿ ಸದ್ಗೃಹಿಣಿಯಾಗಿ
ಬದುಕಿನ ಬಹು ಪಾತ್ರಧಾರಿಣಿಯಾಗಿ
ಸಂಸಾರ ಸಾಗರದ ತಾರಿಣಿಯಾಗಿ
ಎಲ್ಲರ ಉದ್ಧರಿಪ ಗೀರ್ವಾಣಿ ಯಾಗಿ

ನಾ ಕಂಡ ಅವಳು ಅಂದೂ
ಅತಿ ಅಂದ ವೇ
ಬಹು ಕಾಲದ ಬಳಿಕ ಇಂದೂ ಇನ್ನೂ
ಚೆಂದವೇ
ಸೌಂದರ್ಯದ ಧಾರೆಯ
ಮಾಲೆಯ ತುಂಬ
ಆಗಿಹಳು ಸುಂದರ. ಸುಮವೇ

- ಸಚ್ಚಿದಾನಂದ ಕೆ.ಎಸ್‌

ಸಚ್ಚಿದಾನಂದ ಕೆ.ಎಸ್‌

ಸಚ್ಚಿದಾನಂದ ಕೆ.ಎಸ್‌ ಅವರು ಪ್ರತಿಷ್ಠಿತ ಸಾರ್ವಜನಿಕ ಸಂಸ್ಥೆಯಾದ ಬಿ.ಇ.ಎಂ.ಎಲ್ ನಲ್ಲಿ ಮೂವತ್ತು ವರ್ಷಗಳ ದೀರ್ಘ ಸೇವೆಮಾಡಿ ಡೆಪ್ಯುಟಿಜನರಲ್ ಮ್ಯಾನೇಜರ್ ಆಗಿ ನಿವೃತ್ತಿ ಹೊಂದಿದ್ದಾರೆ. ನಿವೃತ್ತಿಯ ಬಳಿಕ ರಚಿಸಿದ ಅವರ ಚೊಚ್ಚಲ ಕೃತಿ.

ಕೃತಿ: ಅವಳ ಹೆಸರು

More About Author