Poem

ಕ್ಷಮಿಸಿ ಬಿಡಿ ತಾಯಿ ನಮ್ಮನ್ನು

ಎಲ್ಲ ಪುರುಷರು ಹೀಗೆ ಇರುವುದಿಲ್ಲ
ತಾಯಿ ಕ್ಷಮಿಸಿಬಿಡು ನಮ್ಮನ್ನು.
ಈ ದೇಶಕ್ಕೆ ಭಾರತಮಾತೆ ಎಂದು ಹೆಸರಿಟ್ಟಿದೆವೆ.
ಈ ಕಾಡು, ಈ ಹಸಿರು, ಈ ಬೆಟ್ಟ, ಈ ಗುಡ್ಡ ಈ
ಭೂಮಿ, ಈ ನೆಲ,ನೀರು ಎಲ್ಲದರಲ್ಲೂ ಸ್ತ್ರೀ ಕುಲವನ್ನು
ಕೊಂಡಡಾಡುತ್ತಿರುತ್ತೇವೆ.

ಚಂಡಿ ಚಾಮುಂಡಿ, ದುರ್ಗೆ, ಸರಸ್ವತಿ, ಲಕ್ಷ್ಮಿ, ಪಾರ್ವತಿ ಎಂದು
ಹೆಣ್ಣು ದೇವರುಗಳನ್ನೆಲ್ಲ ಪೂಜಿಸಲು, ಗುಡಿಗುಡಿಗಳಲ್ಲಿ ಸ್ತ್ರೀ
ದೇವತೆಗಳಿಗೆಲ್ಲ ಮೂರ್ತಿ ಕೆತ್ತಿ, ಪ್ರತಿಷ್ಠಪಿಸಿ, ಆರತಿ ಎತ್ತುತ್ತೇವೆ.
ಮಲ್ಲಿಗೆ, ಕನಕಂಬರ, ಸಂಪಿಗೆ, ಸೇವಂತಿಗೆ ವಿವಿಧ ಹೂಗಳಲ್ಲಿ ಈ
ಮೂಕ ಕಲ್ಲುಗಳನ್ನು ಬೆಳಗಿಸುತ್ತೇವೆ.

ಪಂಚಾಮೃತ, ಎಳನೀರು, ಕುಂಕುಮ, ಅರಿಶಿಣದ ಅಭಿಷೇಕ
ಮಾಡಿ ಭಕ್ತಿಯಿಂದ ಪೂಜಿಸುತ್ತೇವೆ.
ತಾಯಿ ಕ್ಷಮಿಸಿ ಬಿಡು ನಮ್ಮನ್ನು
ಹೆತ್ತ ತಾಯಿಯಲ್ಲಿ ದೇವರನ್ನು ಕಾಣುತ್ತೇವೆ.

ನಿಮ್ಮ ಕೊಮಾಲ ಕೈಗಳಿಂದ ರಾಖಿ ಕಟ್ಟಿಸಿಕೊಂಡು
ನೀವು ಸಹೋದರಿಯರೆಂದು ಮನಸಿಗೂ ತಂದು ಕೊಂಡಿದ್ದೇವೆ.
ನಮ್ಮಂತಲ್ಲ ಅವರು, ಬೆತ್ತಲು ಮಾಡಿ ಮೆರವಣಿಗೆ ನಡೆಸಿದವರು.

ಪುರುಷ ಕುಲಕ್ಕೆ ಪಾಷಂಡಿಗಳು.
ಎಲ್ಲ ಪುರುಷರು ಹೀಗೆ ಇರುವುದಿಲ್ಲ.
ಈ ಷಂಡ ವರ್ತನೆಗೆ ನಾವು ಕೂಡ ತಲೆ ತಗ್ಗಿಸಿದ್ದೇವೆ.
ಪುರುಷ ಎಂದುಕೊಳ್ಳಲು ನಾಚಿಕೆ ಪಡುತ್ತಿದ್ದೇವೆ.
ಕ್ಷಮಿಸಿ ಬಿಡುತಾಯಿ ನಮ್ಮನ್ನು.

- ಜಗದೀಶ್ ಜೋಡುಬೀಟಿ

ವಿಡಿಯೋ
ವಿಡಿಯೋ

ಜಗದೀಶ್ ಜೋಡುಬೀಟಿ

ಜಗದೀಶ್ ಜೋಡುಬೀಟಿ ಅವರು ಮೂಲತಃ ಕೊಡಗಿನವರು. ಅವರು ಕಾವ್ಯ ಪ್ರಕಾರಗಳಲ್ಲಿ ಆಸಕ್ತಿಯನ್ನು ಹೊಂದಿದ್ದು, ಈಗಾಗಲೇ ಹಲವು ಕವಿತೆಗಳನ್ನು ಬರೆದು, ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಿರುತ್ತಾರೆ.

More About Author