ನೆನಪಾಗುತ್ತಾಳೆ ಅಮ್ಮ ಒಂದಿಡಿ ಪ್ರೀತಿಗಾಗಿ ಹೃದಯ ಮಿಡಿದಾಗ ಸೋತು ಸುಸ್ತಾಗಿ ಒರಗಲು ದಿಂಬು ಕಾಣದಾದಾಗ ತಡಕಾಡುತ್ತದೆ ಮೆತ್ತನೆಯ ಮಡಿಲು.
ಅಲವತ್ತುಕೊಳ್ಳಲು ನೂರೆಂಟು ಮಾತು 'ಬೇಜಾರು ಮಾಡಿಕೊಳ್ಳಬೇಡ್ವೆ ಜೀವನ ಅಂದ್ರೆ ಹೀಗೆ' ತಾಳ್ಮೆ, ಸಹನೆ,ಸಂಯಮ ಧಾರೆಯೆರೆದು ಮಿಡಿವ ಅಂತರಂಗದ ಒಡಲು ಅವಳು ಮಾತ್ರ.
ಸಾಸಿವೆ, ಕಡ್ಲೆ ಬೇಳೆ, ತೊಗರಿ ಬೇಳೆ, ಕೊತ್ತಂಬರಿ ಹೀಗೆ ಒಂದೊಂದೂ ಗುರುತಿಸಲು ಕಾರಣವಾಗಿ ಅಡಿಗೆ ಕಲಿಸಿದವಳು ನಿತ್ಯ ಕೇಳುತ್ತಿದ್ದಳವಳು ಉಂಡು ಮೇಲೆದ್ದಾಗ 'ಹೊಟ್ಟೆ ತುಂಬ ಉಂಡ್ಯಾ?'
ಮಡಿಸಿಟ್ಟ ಸೀರೆ ಬಿಚ್ಚಿ ಹರಡಿಕೊಂಡಾಗ ಅಲ್ಲಿ ಬಂದು ನಿಲ್ಲುತ್ತಾಳೆ ಹೀಗೀಗೇ ಉಡಬೇಕು ನಿರಿಗೆ ಕೈ ಹಿಡಿದು ತಾನೇ ಒಪ್ಪ ಮಾಡುವವಳು ನಡೆವಾಗ ಹುಷಾರೆಂದು ಜೀವನ ಪಾಠ ಕಲಿಸಿದವಳು.
ಹೊತ್ತು ಮೂಡುವ ಮುನ್ನ ತಲೆ ಸವರಿ 'ಎದ್ದೇಳು ಮೂಡಣದ ಸೂರ್ಯ ನಿನಗಾಗಿ ಕಾಯುತಿರುವ' ಅಮ್ಮನಾಡುವ ಹುಸೀ ಸುಳ್ಳು ಮನಕೇನೊ ಖುಷಿ ಸೋಂಬೇರಿತನ ಇಲ್ಲವಾಗಿಸಿದವಳು.
ಹೆಜ್ಜೆ ಹೆಜ್ಜೆಗೂ ತನ್ನ ಛಾಪು ಮೂಡಿಸಿದ ಅಮ್ಮನೆಂಬ ಅಮೃತ ಚಿರನಿದ್ರೆಗೆ ಜಾರಿದ ಕ್ಷಣ ಒಂದಿನಿತೂ ಮರೆಯಲಾಗದ ಮನಕೇಗೆ ಸಾಂತ್ವನ ನೀಡಲೆಂಬುದೇ ಬಿಡಿಸಲಾಗದ ಒಗಟು!
ಗೀತಾ ಜಿ ಹೆಗಡೆ ಕಲ್ಮನೆ
ಗೀತಾ ಜಿ ಹೆಗಡೆ ಕಲ್ಮನೆ ಮೂಲತಃ ಬೆಂಗಳೂರಿನವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರ.
ಕೃತಿಗಳು: ಮನಸೆ ನಿನೇಕೆ ಹೀಗೆ (ಲೇಖನಗಳ ಸಂಗ್ರಹ)
Daily Column View All
ಕನ್ನಡಕ್ಕೆ ಬಂದ ವಿಶ್ವದ ಪರಿಮಳ- ಸಾವಿರದ ಒಂದು ಪುಸ್ತಕ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಪೇಂಟಿಂಗ್ ಎಂಬುದು ಐಡಿಯಾ ಮತ್ತು ವಾಸ್ತವದ ಮಧ್ಯಂತರ ಸ್ಥಿತಿ – ಲೀ ಉಹ್ವಾನ್
Zoom with Bookbrahma
Mukha Mukhi
Latest Story View All
ಕೆ.ಎಸ್ ಗಂಗಾಧರ
Latest Poem View All
ಅಲ್ಲಾಗಿರಿರಾಜ್ ಕನಕಗಿರಿ - ಮನಸು ಮಾರುವ ಸಂತೆ
Punch Line
Gandhada Beedu
©2024 Book Brahma Private Limited.