ಕವಿತೆ - 1
ಬೆಡಗಿನ ಇರುಳು ಮಂತ್ರ,
ಮುಗ್ಧಗೊಳಿಸುವಂತಿತ್ತು. ಹೃದಯ ಮನಸು,
ಆ
ಕ್ಷಣಗಳಲಿ ಬಂದಿಯಾಗಿದ್ದವು.
ಚಂದ್ರ ಆಗಸದಿಂದ ಕೆಳಗಿಳಿದು, ಮರವೇರಿ ಕುಳಿತಿತ್ತು.
ಗುಲ್ಮೊಹರ್ ಹೂವಿನೊಡನೆ. ಸಂಭಾಷಿಸುತ್ತ .
ನೀನು ಆಗ ನನಗೆ ಮೊದಲಬಾರಿ ಮುತ್ತನಿತ್ತೆ.
ಅದು ನಮಗೆ ಅನಿರೀಕ್ಷಿತ,
ಸುಂದರ, ಗಳಿಗೆಯಾಗಿತ್ತು.
ಏಕೆಂದರೆ,
ಆ ಇರುಳೇ ಹಾಗಿತ್ತು.
ಮತ್ತೇರಿದ ಆ,
ಕ್ಷಣಗಳು ನನ್ನ ಅಂಕೆಯಲ್ಲೂ ಇರಲಿಲ್ಲ.
ಮತ್ತೆ
ನಿನ್ನ ಅಂಕೆಯಲ್ಲೂ ಕೂಡ!
ಕವಿತೆ - 2
ಇಂದೇಕೋ ಇರುಳು ಉದಾಸವಿದೆ.
ಅವನ ನೆನಪಿನ ಹಣತೆ ಹಚ್ಚೋಣ.
ಅವನದೇ ಪ್ರಸ್ತಾಪವ ಮಾಡೋಣ.
ಅವನ ನೆನಪಿನ ವಿರಹ
ಗೀತೆಯ ಹಾಡುತ,
ಈ ಉದಾಸ ಇರುಳ ಕಳೆಯೋಣ.
ಎಚ್.ಎಸ್. ಮುಕ್ತಾಯಕ್ಕ
ಎಚ್.ಎಸ್. ಮುಕ್ತಾಯಕ್ಕ ಅವರು 1954 ಜನವರಿ 28ರಂದು ಜನಿಸಿದರು. ಇವರು ಬರೆದ ಪ್ರಮುಖ ಕೃತಿಗಳೆಂದರೆ ನಾನು ಮತ್ತು ಅವನು, ನೀವು ಕಾಣಿರೇ ನೀವು ಕಾಣಿರೇ, ಡಕ್ಕೆಯ ಬೊಮ್ಮಣ್ಣ, ಶಿವಶರಣೆ ಮುಕ್ತಾಯಕ್ಕ, ಕಭೀ ಕಭೀ ಮುಂತಾದವು. ಇವ ನೀವು ಕಾಣಿರೇ ನೀವು ಕಾಣಿರೇ ಕವನ ಸಂಕಲನಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದ ರತ್ಮಮ್ಮ ಹೆಗ್ಗಡೆ ದತ್ತಿ ನಿಧಿ ಬಹುಮಾನ, ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಸಂದಿವೆ.
More About Author