ಮೈಮೂಳೆ ಸವೆಸಿ, ನೆತ್ತರು ಇಂಗಿಸಿ
ಬೆಳಗಿದ ಕಣ್ಣಗಳು ಮನೆ ಬೆಳಕಾಗಿಸಿ
ಮನ ಮಂಕಾಗದವಳ ದುಡಿತ
ಈಗಲೂ ತಪ್ಪಲಿಲ್ಲ
ಹತ್ತು ಹೆತ್ತು ಆರು ಉಳಿದು
ಅತ್ತತ್ತು ಉಸಿರು ಬಿಸಿಯಾದರೂ
ಕಂಗಳಲಿ ಭರವಸೆಯ ತಣ್ಣನೆ ಬೆಳಕು
ಮೊಗದ ತುಂಬೆಲ್ಲ ಪೂರ್ಣ
- ಹೇಮಲತಾ ವಡ್ಡೆ
ಹೇಮಲತಾ ವಡ್ಡೆ
ಬರಹಗಾರ್ತಿ ಹೇಮಲತಾ ವಡ್ಡೆ ಅವರು ಕನ್ನಡ ಪ್ರಾಧ್ಯಾಪಕಿ. 1967 ರ ಆಗಸ್ಟ್ 4 ರಂದು ಜನಿಸಿದರು. ’ಪ್ರತಿಫಲನ’ ಅವರ ಕೃತಿ 2012 ರಲ್ಲಿ ಪ್ರಕಟಣೆ ಕಂಡಿತು. ಕರ್ನಾಟಕ ಲೇಖಕಿಯರ ಸಂಘದ ಬೀದರ್ ಜಿಲ್ಲಾ ಶಾಖೆಗೆ 2 ಬಾರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.